ದೇಶಪ್ರಮುಖ ಸುದ್ದಿ

ನನ್ನ ಹಿರಿಯಣ್ಣನನ್ನು ಕಳೆದುಕೊಂಡೆ : ಕರುಣಾನಿಧಿ ನಿಧನಕ್ಕೆ ಗೌಡರ ಶೋಕ

ನವದೆಹಲಿ (ಆ.8): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನದಿಂದ ನನ್ನ ಹಿರಿಯಣ್ಣನನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರುಣಾನಿಧಿ ಅವರ ನಿಧನದ ಸುದ್ದಿಯಿಂದ ತೀವ್ರ ಆಘಾತ ಉಂಟಾಗಿದ್ದು, ದೇಶವು ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ಕರುಣಾನಿಧಿ ಅವರು ಹಳ್ಳಿಯಿಂದ ಬಂದು 50 ವರ್ಷ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಆ ಜನತೆಯ ಆಶೀರ್ವಾದಿಂದ ಕೇಂದ್ರದಲ್ಲಿ ಎನ್‍ಡಿಎ ಮತ್ತು ಯುಪಿಎ ಸರ್ಕಾರ ಆಡಳಿತ ನಡೆಸಲು ಸಹಾಯ ಮಾಡಿದ್ದರು ಎಂದು ಸ್ಮರಿಸಿದ್ದಾರೆ.

ಕರುಣಾನಿಧಿ ಅವರನ್ನು ಸುಮಾರು ಐದು ದಶಕಗಳಿಂದ ಬಹಳ ಹತ್ತಿರದಿಂದ ಬಲ್ಲೆ ಎಂದಿರುವ ಗೌಡರು, ನನ್ನ ಹಿರಿಯಣ್ಣನನ್ನು ಕಳೆದುಕೊಂಡಂತಾಗಿದೆ. ತಾವು ಪ್ರಧಾನಿಯಾಗಲು ಕರುಣಾನಿಧಿ ಅವರ ಪಾತ್ರವು ಬಹಳ ದೊಡ್ಡದಾಗಿತ್ತು. ಇಡೀ ದೇಶಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ ಉಂಟಾಗಿದೆ. ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಗೌಡರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: