ಪ್ರಮುಖ ಸುದ್ದಿಮೈಸೂರು

ನೋಟು ಅಮಾನ್ಯವಾಗಿದ್ದೇ ಗಿರಿಜನರನ್ನು ಒಕ್ಕಲೆಬ್ಬಿಸಲು ಕಾರಣ : ಗೃಹಸಚಿವರ ಗೊಂದಲದ ಹೇಳಿಕೆ

ನೋಟು ಅಮಾನ್ಯವಾಗಿದ್ದೇ ಮಡಿಕೇರಿಯ ದಿಡ್ಡಹಳ್ಳಿಯಲ್ಲಿರುವ ಗಿರಿಜನರನ್ನು  ಒಕ್ಕಲೆಬ್ಬಿಸೋದಕ್ಕೆ ಕಾರಣವಾಗಿದೆ ಎಂಬ ಗೊಂದಲದ ಹೇಳಿಕೆಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ನೀಡಿದ್ದಾರೆ.

ಮೈಸೂರಿನಲ್ಲಿ ನಡೆಯಲಿರುವ ಪೊಲೀಸ್ ಕರ್ತವ್ಯಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನೋಟು ಅಮಾನ್ಯವಾಗಿದ್ದೇ ಗಿರಿಜನರನ್ನು ಒಕ್ಕಲೆಬ್ಬಿಸೋದಕ್ಕೆ ಕಾರಣವಾಗಿದೆ ಎಂದು ಗೊಂದಲದ ಹೇಳಿಕೆಯನ್ನು ನೀಡಿದ ಸಚಿವರು ಈ ಘಟನೆಗೆ ನೋಟು ಬ್ಯಾನ್ ಆಗಿದ್ದೇ ಕಾರಣ ಎಂದು ಪುನರುಚ್ಚರಿಸಿದರು.

ಗಿರಿಜನರು ಕೂಲಿ ಮಾಡಿಕೊಂಡು ಬದುಕುವವರು. ಆದರೆ ಕಳೆದ 42ದಿನಗಳಿಂದ ಅವರಿಗೆ ವೇತನ ಸಿಗುತ್ತಿಲ್ಲ. ಅಸಂಘಟಿತ ವಲಯದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ತಕ್ಷಣ ಪರಿಣಾಮ ಬೀರದಿದ್ದರೂ, ತಡವಾಗಿ ಜನರ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದರು

ಮಡಿಕೇರಿಯ ದಿಡ್ಡಹಳ್ಳಿಯಲ್ಲಿ ಪಿ.ಚಿದಂಬರಂ ಹಾಗೂ ಟಾಟಾ ಅವರ ಜಮೀನಿದ್ದರೆ ಅಲ್ಲಿನ ಜಿಲ್ಲಾಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಒತ್ತುವರಿಗೂ ಗಿರಿಜನರ ಸಮಸ್ಯೆಗೂ ತಳುಕು ಹಾಕಬಾರದು ಎಂದು ಗೃಹ ಸಚಿವವರು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಕೊಡಗಿನ ದಿಡ್ಡಹಳ್ಳಿಯಲ್ಲಿರುವ ಅರಣ್ಯ ಒತ್ತುವರಿ ಜಾಗವನ್ನು ವಶಕ್ಕೆ ಪಡೆಯುವ ಅಧಿಕಾರ ಜಿಲ್ಲಾಧಿಕಾರಿಯವರಿಗೆ ಇದೆ. ನಮ್ಮ ಪರವಾಗಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದರು.

ಅಲ್ಲಿನ ಗಿರಿಜನರಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ ಅಲ್ಲಿನ ಸಮಸ್ಯೆಯ ಕುರಿತು ವರದಿಯನ್ನೂ ಕೇಳಿದ್ದೇನೆ ಎಂದು ತಿಳಿಸಿದರು..

ಈ ಸಂದರ್ಭ ಕಾಂಗ್ರೆಸ್ ನ ಕೆಲವು ಮುಖಂಡರು ಸಚಿವರ ಜೊತೆಗಿದ್ದರು.

Leave a Reply

comments

Related Articles

error: