ಮೈಸೂರು

ಸರ್ಕ್ಯೂಟ್ ಬೆಂಚ್‍ಗಳಿಂದ ಪ್ರಕರಣಗಳ ಇತ್ಯರ್ಥ ಸುಲಭವಾಗಲಿದೆ :ದೇವ್ ದರ್ಶನ್ ಸುದ್

ಸರ್ಕ್ಯೂಟ್ ಬೆಂಚ್‍ಗಳಿಂದ ಪ್ರಕರಣಗಳ ಇತ್ಯರ್ಥ ಸುಲಭವಾಗಲಿದೆ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಹಾಗೂ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷ ದೇವ್ ದರ್ಶನ್ ಸುದ್ ತಿಳಿಸಿದರು

ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಸೋಮವಾರ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಸರ್ಕ್ಯೂಟ್ ಬೆಂಚ್ ನ್ನು ದೇವ್ ದರ್ಶನ್ ಸುದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಲ್ಬುರ್ಗಿ, ಧಾರವಾಡ, ಬೆಂಗಳೂರು ರಾಜ್ಯದಲ್ಲಿ ಸರ್ಕ್ಯೂಟ್ ಬೆಂಚ್ ಹೊಂದಿರುವ ಜಿಲ್ಲೆಗಳಾಗಿವೆ. ಶೀಘ್ರವಾಗಿ ವಿಲೇವಾರಿಯಾಗುವ ಆದಾಯ ತೆರಿಗೆ ಪ್ರಕರಣಗಳ ಅವಶ್ಯಕತೆಯಿದೆ. ಇದರಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆಯೂ ಅಗತ್ಯ ಎಂದರು.

ಇಲಾಖೆಯಿಂದ ಪ್ರತಿ 3-4ತಿಂಗಳಿಗೊಮ್ಮೆ ವಿಚಾರಣಾ ಪೀಠವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈಗ ಮೈಸೂರಿನಲ್ಲಿ ಸರ್ಕ್ಯೂಟ್ ಬೆಂಚ್ ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ ಎಂದರು.

ಎಫ್‍ಕೆಸಿಸಿ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಆದಾಯ ತೆರಿಗೆ ಮೇಲ್ಮನವಿ  ಪ್ರಾಧಿಕಾರದ ಸದಸ್ಯ ಸುನಿಲ್ ಕುಮಾರ್ ಯಾದವ್, ರಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: