ಮೈಸೂರು

ಚಾಮುಂಡಿಬೆಟ್ಟದಲ್ಲಿ ದೇಗುಲದ ವಿಶೇಷ ಪ್ರವೇಶ ಶುಲ್ಕ ಹೆಚ್ಚಳ : ಭಕ್ತರಿಂದ ಆಕ್ರೋಶ

ಮೈಸೂರು,ಆ.8:- ಮೈಸೂರಿನ ಚಾಮುಂಡಿಬೆಟ್ಟದಲ್ಲಿ ದೇಗುಲದ ವಿಶೇಷ ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಇದಕ್ಕೆ ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ.

ಚಾಮುಂಡೇಶ್ವರಿ ದೇಗುಲದ ವಿಶೇಷ ಪ್ರವೇಶ ಶುಲ್ಕ  100ರೂಪಾಯಿ ಇತ್ತು. ಇದೀಗ 300 ರೂಗಳಿಗೆ ಏರಿಕೆ ಮಾಡಲಾಗಿದ್ದು, ಅಭಿಷೇಕ ಸೇರಿದಂತೆ ಒಟ್ಟು 550 ರೂ ನಿಗದಿ ಮಾಡಲಾಗಿದೆ. ಇನ್ನು ವಿಶೇಷ ಪ್ರವೇಶ ಶುಲ್ಕ ಏರಿಕೆಗೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿದ್ದರೂ ಬೆಲೆ ಏರಿಕೆ ಮಾಡಲಾಗಿದೆ. ದೇಗುಲ ವ್ಯಾಪಾರ ಕೇಂದ್ರವಾಗಿ ಮಾರ್ಪಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಆಡಳಿತ ಮಂಡಳಿ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಪ್ರೊ. ನಂಜರಾಜ್ ಅರಸ್ ಅವರು, ವಿಶೇಷ ಪ್ರವೇಶ ಶುಲ್ಕ ಏರಿಕೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: