ಮೈಸೂರು

ಜಿಎಸ್ ಟಿ ತೆರಿಗೆ ಪಾರದರ್ಶಕವಾಗಿರಲಿದೆ : ಟಿ.ಪುಗಳ್

ಜಿಎಸ್‍ಟಿ ಮಸೂದೆ ಪಾರದರ್ಶಕವಾದ ತೆರಿಗೆಯ ರೂಪದಿಂದ ಕೂಡಿರುವುದರ ಜೊತೆ ಈ ಮಾದರಿ ತೆರಿಗೆ ವಹಿವಾಟಿನಲ್ಲಿ ಕರ್ನಾಟಕ ರಾಜ್ಯ ಅಗ್ರ ಸ್ಥಾನಕ್ಕೆ ಏರಲಿದೆ ಎಂದು ಟ್ಯಾಲಿ ಸೆಲ್ಯೂಷನ್ ಬೆಂಗಳೂರು ಉಪಾಧ್ಯಕ್ಷ ಟಿ. ಪುಗಳ್ ತಿಳಿಸಿದರು.

ಮೈಸೂರಿನ ಇನ್ಸಟಿಟ್ಯೂಟ್  ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ದಿ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಬೆಂಗಳೂರು ಟ್ಯಾಲಿ ಎಜುಕೇಷನ್ ಪ್ರೈವೇಟ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸರಕು ಮತ್ತು ಸೇವಾ ತೆರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಕಾರ ಹೊರಡಿಸುವ ಪ್ರತಿಯೊಂದು ಕಾನೂನಿನ ವಿಚಾರಗಳನ್ನು ರಾಷ್ಟ್ರದ ಪ್ರತಿಯೊಬ್ಬ ನಾಗರಿಕನು ತಿಳಿದು ಜಾಗೃತಿ ಮೂಡಿಸಿಕೊಳ್ಳಬೇಕು. ಲೆಕ್ಕ ಪರಿಶೋಧಕರು ಮಾತ್ರ ತಿಳಿದುಕೊಳ್ಳಬೇಕೆಂಬ ನಿಯಮವಿಲ್ಲ.ಕಾಯ್ದೆಯನ್ನು ತಿಳಿದುಕೊಳ್ಳದೇ ಉದಾಸೀನ ತೋರಿದರೆ ಆರ್ಥಿಕ ಹೊಡೆತ ತಿನ್ನಬೇಕಾಗಲಿದೆ ಎಂದರು.

ಸರಕಾರ ಜಿಎಸ್ ಟಿಯನ್ನು ಜಾರಿ ಮಾಡಿದಲ್ಲಿ ಬಂಡವಾಳ ಹೆಚ್ಚಾಗಲಿದೆ. ಪ್ರಾದೇಶಿಕವಾಗಿದ್ದ ವಹಿವಾಟುಗಳು ರಾಷ್ಟ್ರೀಯವಾಗಿ ಮಾರ್ಪಾಡಾಗುವುದಲ್ಲದೇ, ಹೊಸ ಉದ್ಯಮದ ಉದಯಕ್ಕೆ ಕಾರಣವಾಗಲಿದೆ ಮತ್ತು  ಬೃಹತ್ ಪ್ರಮಾಣದಲ್ಲಿ ಲಾಭದಾಯಕವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್.ಸತೀಶ್, ದಿ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆ ಅಧ್ಯಕ್ಷ ಚಿನ್ನಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: