ಸುದ್ದಿ ಸಂಕ್ಷಿಪ್ತ

ಆರ್.ಎನ್.ಜಯಗೋಪಾಲ್ ಒಂದು ನೆನಪು ‘ಗೀತಯಾನ’ ನಾಳೆ

ಮೈಸೂರು, ಆ.8 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತಿ ಆರ್.ಎನ್.ಜಯಗೋಪಾಲ್ ಒಂದು ನೆನಪು ಹಾಗೂ ಭಾವ ಪ್ರಧಾನ ಚಿತ್ರ ಗೀತೆಗಳ ಗೀತಯಾನ ಕಾರ್ಯಕ್ರಮವನ್ನು ಆ.9ರ ಸಂಜೆ 5 ಗಂಟೆಗೆ ಅರಮನೆ ಉತ್ತರದ್ವಾರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಹಾರಾಣಿ ಕಾಲೇಜಿನ ಪ್ರಾಧ‍್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಉದ್ಘಾಟಿಸಿ ನಂತರ ಉಪನ್ಯಾಸ ನೀಡುವರು. ಮುಖ್ಯ ಅತಿಥಿಯಾಗಿ ಜನಚೇತನ ಸಂಸ್ಥೆ ಅಧ್ಯಕ್ಷ ಪ್ರಸನ್ನ ಎನ್. ಗೌಡ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ನಂತರ ಗೀತ ಗಾಯನ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: