ಮೈಸೂರು

ಸಂಶೋಧನೆಗಳು ಉಪಯುಕ್ತವಾಗಿಲ್ಲ : ಡಾ.ಬಿ.ಎಂ.ಹೆಗ್ಡೆ ವಿಷಾದ

ಭಾರತದಲ್ಲಿ ಸಂಶೋಧನೆಗಳು ನಡೆಯುತ್ತಿದ್ದರೂ ಮಾನವರ ಜೀವನಕ್ಕೆ ಉಪಯುಕ್ತವಾಗಿಲ್ಲ ಎಂದು ಭಾರತೀಯ ಸಮಾಜ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಡಾ.ಬಿ.ಎಂ.ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ 40ನೇ ಭಾರತೀಯ ಸಮಾಜ ವಿಜ್ಞಾನ ಸಮ್ಮೇಳನ 2016ರ ಐದು ದಿನಗಳ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಬಿ.ಎಂ.ಹೆಗ್ಡೆ ಮಾತನಾಡಿದರು.

ಕೆಲವರ ಹಿಡಿತದಲ್ಲಿ ವಿಜ್ಞಾನ ಸಿಲುಕಿಕೊಂಡಿದೆ. ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ನಡೆಸಿದ ಸಂಶೋಧನೆಯಿಂದ ತಯಾರಾದ ಔಷಧಗಳ ಬಳಕೆಯಿಂದ ಮಾನವನ ಶರೀರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಡಿಮೆ ಔಷಧ ಬಳಸಿ ಹೆಚ್ಚು ಆರೋಗ್ಯವಂತರಾಗಿರಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಪ್ರೊ.ರಿಚರ್ಡ್ ಸ್ಮಿತ್ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭಾರತದ ವಿಶ್ವವಿದ್ಯಾಲಯಗಳು ಸಂಶೋಧನೆ, ಉಪನ್ಯಾಸ ಹಾಗೂ ಸ್ಕಾಲರ್ ಶಿಪ್ ನೀಡುವತ್ತ ಗಮನ ಹರಿಸಿವೆ ಆದರೆ ಇಂಗ್ಲೆಂಡ್ ನಲ್ಲಿ ವಿಜ್ಞಾನ ಆಸಕ್ತಿ ಕಡಿಮೆಯಾಗುತ್ತಿದೆ. ಭಾರತದಲ್ಲಿ ವಿಜ್ಞಾನಕ್ಕೆ ಉಜ್ವಲ ಭವಿಷ್ಯ ಕಂಡುಬರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಐಎಎಸ್ಎಸ್ ಸ್ಥಳೀಯ ಸಂಚಾಲಕ ಪ್ರೊ.ಮುಸಾಫರ್ ಅಸಾದಿ, ಕುಲಸಚಿವ ಪ್ರೊ.ಆರ್.ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: