
ದೇಶಪ್ರಮುಖ ಸುದ್ದಿ
ಉಗ್ರ ಯಾಸಿನ್ ಭಟ್ಕಳ್ ಸೇರಿ ಐವರು ಉಗ್ರರಿಗೆ ಗಲ್ಲುಶಿಕ್ಷೆ
ಹೈದರಾಬಾದ್: 2013ರಲ್ಲಿ ಹೈದರಾಬಾದ್ನ ದಿಲ್ಸುಖ್ ನಗರದಲ್ಲಿ ಬಾಂಬ್ ಸ್ಫೋಟಿಸಿ 18 ಜನರ ಹತ್ಯೆಗೆ ಕಾರಣರಾಗಿದ್ದ ನಿಷೇಧಿತ ಮುಜಾಹಿದೀನ್(ಐಎಂ) ಉಗ್ರ ಸಂಘಟನೆಯ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಹಾಗೂ ಇತರ ನಾಲ್ವರು ಉಗ್ರರಿಗೆ ಎನ್ಐಎ ವಿಶೇಷ ನ್ಯಾಯಾಲಯ ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಐಎಂ ನಿಷೇಧಗೊಂಡ ಬಳಿಕ ಅದರ ಸದಸ್ಯರಿಗೆ ಶಿಕ್ಷೆಯಾಗುತ್ತಿರುವುದು ಇದೇ ಮೊದಲು. ಕಳೆದ 13ರಂದು ಐಎಂ ಸಹ ಸ್ಥಾಪಕ ಮೊಹಮ್ಮದ್ ಅಹ್ಮದ್ ಸಿದ್ದಿಬಾಪ ಅಲಿಯಾಸ್ ಯಾಸಿನ್ ಭಟ್ಕಳ್, ಪಾಕ್ ಪ್ರಜೆ ಜಿಯಾವುದ್ ರೆಹಮಾನ್ ಅಲಿಯಾಸ್ ವಖಸ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ, ತಹಸೀನ್ ಅಖ್ತರ್ ಅಲಿಯಾಸ್ ಮೋನು ಮತ್ತು ಅಜಾಝ್ ಶೇಖ್ ಗಲ್ಲುಶಿಕ್ಷೆಗೆ ಗುರಿಯಾದವರು.
2013ರ ಫೆ.221ರಂದು ಹೈದರಾಬಾದ್ನ ದಿಲ್ಸುಖ್ ನಗರದ ಜನನಿಬಿಡ ಮಾರುಕಟ್ಟೆ ಪ್ರದೇಶದ ಎರಡು ಕಡೆ ಪ್ರಬಲ ಬಾಂಬ್ ಸ್ಪೋಟ ಸಂಭವಿಸಿತ್ತು. ದುರಂತದಲ್ಲಿ 18 ಜನರು ಮೃತಪಟ್ಟು, 131 ಮಂದಿ ಗಾಯಗೊಂಡಿದ್ದರು. ಸ್ಪೋಟದ ಹಿಂದೆ ಇಂಡಿಯನ್ ಮುಜಾಹಿದೀನ್ ಕೈವಾಡವಿರುವುದು ಪ್ರಾಥಮಿಕ ತನಿಖೆಯ ವೇಳೆ ದೃಢಪಟ್ಟಿತ್ತು.