ಮೈಸೂರು

ಬಸ್ ಹತ್ತುವಾಗ ಚಿನ್ನದ ಸರ, ಪರ್ಸ್ ಎಗರಿಸಿ ಪರಾರಿ

ಮೈಸೂರು,ಆ.9:- ಬಸ್ ಹತ್ತುವಾಗ ನೂಕುನುಗ್ಗಲಿದ್ದ ವೇಳೆ ದುಷ್ಕರ್ಮಿಯೋರ್ವ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಮತ್ತೋರ್ವ ಮಹಿಳೆಯ ಬಳಿಯಿದ್ದ ಪರ್ಸ್ ಎಗರಿಸಿದ ಘಟನೆ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಜು.7ರಂದು ರೋಹಿಣಿ ಮತ್ತವರ ಅತ್ತೆ ಲಕ್ಷ್ಮಮ್ಮ ಸಿಟಿ ಬಸ್ ನಿಲ್ದಾಣಕ್ಕೆ ಬಂದು 1.45ರ ಬಸ್ ಹತ್ತಲು ಮುಂದಾದಾಗ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಸಂಬಾಳಿಸಿಕೊಂಡು ಬಸ್ ಹತ್ತಿದಾಗ  ಲಕ್ಷ್ಮಮ್ಮರವರ ಕತ್ತಿನಲ್ಲಿದ್ದ ಸುಮಾರು 23 ಗ್ರಾಂ ತೂಕದ ಚಿನ್ನದ ಚೈನು ಮತ್ತು ರೋಹಿಣಿಯವರ ಪರ್ಸ್ ನಲ್ಲಿದ್ದ ಸುಮಾರು 4 ಗ್ರಾಂ ತೂಕದ ಓಲೆಗಳು ಮತ್ತು ಒಂದು ಮೊಬೈಲ್ ನ್ನು  ಯಾರೋ ಕಳವು ಮಾಡಿದ್ದಾರೆ. ಈ ಕುರಿತು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: