ಮೈಸೂರು

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

ಮೈಸೂರು,ಆ.9:-  ಮೈಸೂರಿನ  ಸರಸ್ವತಿಪುರಂನಲ್ಲಿರುವ ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿರುವ ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯಿಂದ  ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನಿಂದು ಆಯೋಜಿಸಲಾಗಿತ್ತು.

ಕಂಪನಿ ವಲಯ ವ್ಯವಸ್ಥಾಪಕ ಪದ್ಮನಾಭ ಸುವರ್ಣ ಬೆಂಗಳೂರಿನ ಮೆರಿಡಿಯನ್ ಡಯಾಗ್ನಾಸ್ಟಿಕ್ ಸೆಂಟರ್ ಅವರ ಸಹಯೋಗದಲ್ಲಿ ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು,ಸರ್ಕಲ್ ಇನ್ಸ್ ಪೆಕ್ಟರ್  ಪ್ರಕಾಶ್  ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬೆಳಗ್ಗೆ 9.30 ರಿಂದ ಸಂಜೆ 4ರವರೆಗೆ ಶಿಬಿರ ನಡೆಯಲಿದೆ. ಬಿಎಂಐ, ರಕ್ತದೊತ್ತಡ, ಮಧುಮೇಹ, ಎಫ್ ಬಿಎಸ್, ಆರ್.ಬಿಎಸ್, ಆರ್ ಯು ಎ, ಸೀರಂ ಕೊಲೆಸ್ಟ್ರಾಲ್, ಸಿಬಿಸಿ ಮುಂತಾದ ಆರೋಗ್ಯ ಸಂಬಂಧಿ ತಪಾಸಣೆ ನಡೆಯಲಿದ್ದು,ಬೆಂಗಳೂರಿನ ನುರಿತ ವೈದ್ಯರು ತಪಾಸಣೆ ನಡೆಸಲಿದ್ದಾರೆ. ನೂರಕ್ಕೂ ಹೆಚ್ಚು ಮಂದಿಗೆ ಉಚಿತ  ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಕಂಪನಿ ವಲಯ ವ್ಯವಸ್ಥಾಪಕ ಪದ್ಮನಾಭ ಸುವರ್ಣ, ಮೈಸೂರು ಶಾಖಾಧಿಕಾರಿ ಹೆಚ್.ಜೆ.ಮಹೇಶ್, ಸಹಾಯಕ ವ್ಯವಸ್ಥಾಪಕ ಶ್ರೀನಾಥ್, ವಿನೋದ್, ಶಿವಕುಮಾರ್,ಮುಖೇಶ್, ಕೇಶವ ಮೂರ್ತಿ ,ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: