
ದೇಶಪ್ರಮುಖ ಸುದ್ದಿ
ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಪೂಜಾ ದದ್ವಾಲ್ ಸಲ್ಮಾನ್ ಖಾನ್ ಸಹಾಯ ಹಸ್ತ
ಮುಂಬೈ (ಆ.9): ಕ್ಷಯರೋಗದೊಂದಿಗೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಟಿ ಪೂಜಾ ದದ್ವಾಲ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರು ಸಲ್ಮಾನ್ ಖಾನ್ ಜತೆ ‘ವೀರ್ಗತಿ’ (1995) ಚಿತ್ರದಲ್ಲಿ ಪೂಜಾ ಅಭಿನಯಿಸಿದ್ದರು.
ಕ್ಷಯರೋಗದಿಂದ ಬಳಲುತ್ತಿದ್ದ ಪೂಜಾ ಆಸ್ಪತ್ರೆಗೆ ದಾಖಲಾದಾಗ ಅವರ ತೂಕ ಕೇವಲ 23. ಈಗ ಅವರ ಆರೋಗ್ಯದಲ್ಲೂ ಸುಧಾರಣೆ ಕಂಡಿದ್ದು ತೂಕದಲ್ಲೂ ಏರಿಕೆಯಾಗಿದೆ. ಪೂಜಾ ಅವರ ಎರಡೂ ಶ್ವಾಸಕೋಶಗಳು ಸೋಂಕಿಗೆ ಒಳಗಾಗಿದ್ದ ಕಾರಣ ಉಸಿರಾಟ ಕಷ್ಟವಾಗಿತ್ತು. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು. ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಪ್ರತಿಷ್ಠಾನದ ಮೂಲಕ ಪೂಜಾ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡಲಾಯಿತು. ಈಗವರು ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. (ಎನ್.ಬಿ)