ಕ್ರೀಡೆಮೈಸೂರು

ಕಾರ್ಬನ್ ಕರ್ನಾಟಕ ಪ್ರೀಮಿಯರ್ ಲೀಗ್ 2018ರ ನೂತನ ತಂಡ ಪರಿಚಯಿಸಿದ ಮೈಸೂರು ವಾರಿಯರ್ಸ್

ಮೈಸೂರು,ಆ.9:- ಮೈಸೂರು ವಾರಿಯರ್ಸ್ ಮಾಲೀಕರಾದ ಎನ್.ಆರ್.ಸಮೂಹ ಇಂದು ಕಾರ್ಬನ್ ಕರ್ನಾಟಕ ಪ್ರೀಮಿಯರ್ ಲೀಗ್ 2018ರ ನೂತನ ತಂಡವನ್ನು ಪರಿಚಯಿಸಿದೆ. ಕೆಪಿಎಲ್ 7ನೇ ಆವೃತ್ತಿಗಾಗಿ ಜೆ.ಸುಜಿತ್ ಅವರನ್ನು ನಾಯಕನಾಗಿ ವೆಂಕಟೇಶ್ ಪ್ರಸಾದ್ ಅವರನ್ನು ನಮ್ಮ ಮೆಂಟರ್ ಆಗಿ ಘೋಷಿಸಲಾಗಿದೆ. ಕಿಶನ್ ಬೆಡಾರೆ ಮತ್ತು ಗೌತಮ್ ಸಾಗರ್ ಈ ಇಬ್ಬರು ಆಟಗಾರರನ್ನು ಇತ್ತೀಚೆಗೆ ಮೈಸೂರು ವಾರಿಯರ್ಸ್ ನಡೆಸಿದ ಪ್ರತಿಭಾನ್ವೇಷಣೆಯಿಂದ ಆಯ್ಕೆ ಮಾಡಲಾಗಿದೆ.

ನೂತನ ತಂಡದಲ್ಲಿ ಅಮಿತ್ ವರ್ಮಾ, ಕೆ.ಗೌತಮ್, ಜೆ.ಸುಜಿತ್ (ನಾಯಕ)ರಾಜೂ ಭಟ್ಕಳ, ಬಿ.ಎನ.ಭರತ್, ಎಸ್.ಪಿ.ಮಂಜುನಾಥ್, ಶೋಯೆಬ್ ಮ್ಯಾನೇಜರ್, ಅರ್ಜುನ್ ಹೊಯ್ಸಳ, ಕೆ.ವಿ.ಸಿದ್ದಾರ್ಥ, ಪ್ರತಿಕ್ ಜೈನ್, ವೈಶಾಖ್ ವಿಜಯ್ ಕುಮಾರ್, ಶರತ್ ಶ್ರೀನಿವಾಸ್, ಮನೋಜ್ ಕೆ.ಎಚ್, ಕುಶಾಲ್ ವಾಧ್ವಾನಿ, ಲವ್ ನಿತ್ ಸಿಸೋಡಿಯಾ, ವಿನಯ್ ಸಾಗರ್, ಕಿಶನ್ ಬೆಡಾರೆ, ಗೌತಮ್ ಸಾಗರ್ ಇದ್ದಾರೆ. ಕೆಪಿಎಸ್ ಬೆಂಬಲ ತಂಡದ ತರಬೇತುದಾರರಾಗಿ ಶ್ಯಾಮ್ ರಾವ್, ಮುಖ್ಯತರಬೇತುದಾರರಾಗಿ ರಕ್ಸ್ ಮುರಳೀಧರ್ ಆಯ್ಕೆಯಾಗಿದ್ದಾರೆ. ತಂಡದ ಭೌತಚಿಕಿತ್ಸಕರಾಗಿ ಶ್ರೀರಂಗ, ಸಹಾಯಕ ಭೌತ ಚಿಕಿತ್ಸಕರಾಗಿ ಮೋಹನದಾಸ್, ತಂಡದಲ್ಲಿರುತ್ತಾರೆ. ತಂಡದ ಮ್ಯಾನೇಜರ್ ಎಂ.ಆರ್.ಸುರೇಶ್, ತಂಡದ ಸಂಯೋಜಕರಾಗಿ ಎನ್.ಅರುಣ್ ಕುಮಾರ್, ಮಧುಸೂದನ್ ಆರ್, ಇರುತ್ತಾರೆ. ಏಳನೇ ಆವೃತ್ತಿ ಆಗಸ್ಟ್ 15ರಿಂದ ಆರಂಭವಾಗಲಿದ್ದು, 7ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: