
ಮೈಸೂರು
ವಾಸವಿ ನಗರೇಶ್ವರ ದೇವಸ್ಥಾನದ ಭೂಮಿ ಪೂಜೆ : ಶಿಲಾನ್ಯಾಸ
ಮೈಸೂರು,ಆ.9 : ಶ್ರೀವಾಸವಿ ನಗರೇಶ್ವರ ದೇವಸ್ಥಾನದ ಭೂಮಿ ಪೂಜಾ ಕಾರ್ಯಕ್ರಮವನ್ನು ವಿಜಯನಗರದ 2ನೇ ಹಂತದ ಸಿ.ಎ.ನಿವೇಶನದಲ್ಲಿ ಏರ್ಪಡಿಸಲಾಗಿದೆ ಎಂದು ವಾಸವಿ ವೃಂದದ ಅಧ್ಯಕ್ಷ ವೈ.ಜಿ.ಚಿನ್ನಸ್ವಾಮಿ ತಿಳಿಸಿದರು.
ಆ.11ರಂದು ಸಂಜೆ 5 ಗಂಟೆಗೆ ವಾಸವಿ ನಗರೇಶ್ವರ ದೇವಸ್ಥಾನ, ಸಮುದಾಯ ಸೇವಾ ಮತ್ತು ಯೋಗ ಮಂದಿರದ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮುಡಾ ಮಾಜಿ ಅಧ್ಯಕ್ಷ ಧ್ರುವ ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷೆ ಪುಷ್ಪ ಅಮರ್ ನಾಥ್ ಹಾಗೂ ಇತರರು ಇರುವರು. ಮಿಸಸ್ ಯೂನಿವರ್ಸ್ 2018ರ ವಿಜೇತೆ ಮನಿಷಾ ವರುಣ್ ಅವರನ್ನು ಸನ್ಮಾನಿಸಲಾಗುವುದು. ಶ್ರೀರಾಮಕೃಷ್ಣ ಆಶ್ರಮದ ಆತ್ಮಜ್ಞಾನಾನಂದಜೀ ಮಹಾರಾಜ್ ಸಾನಿಧ್ಯ ವಹಿಸುವರು ಎಂದರು.
ಆ.12ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ನಾಗೇಂದ್ರ, ವಿಧಾನ ಪರಿಷತ್ ಸದ್ಯ ಶರವಣ, ಮಾಜಿ ಶಾಸಕರಾದ ವಾಸು, ಹೆಚ್.ಪಿ.ಮಂಜುನಾಥ್, ವಾಸವಿ ವೃಂದ ಮೈಸೂರು ಪಶ್ಚಿಮದ ಸಂಸ್ಥಾಪಕ ಅಧ್ಯಕ್ಷ ಆರ್.ವಾಸುದೇವ ಮೂರ್ತಿ, ಅಧೀಕ್ಷಕ ಅಭಿಯಂತರ ಸುರೇಶ್ ಬಾಬು ಮತ್ತಿತರ ಗಣ್ಯರು ಹಾಜರಿರುವರು ನಂತರ ಶಿಲಾನ್ಯಾಸ ಮತ್ತು ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಮಕ್ಕಳಲ್ಲಿ ಆತ್ಮ ವಿಶ್ವಾಸ ಹಾಗೂ ಜ್ಞಾನವೃದ್ಧಿಗಾಗಿ ಸರಸ್ವತಿ ಬೀಜಾಕ್ಷರ ಮಂತ್ರವನ್ನು ಜೇನುತುಪ್ಪದಿಂದ ಬರೆಯುವ ವಿಶೇಷ ಕಾರ್ಯಕ್ರಮವನ್ನು ಜ್ಯೋತಿಷಿ ಡಾ.ಡಿ.ಉಮೇಶ್ ಕಿಕ್ಕೇರಿ ಹಾಗೂ ಗುಂಡ್ಲುಪೇಟೆ ಅಂಗಳಮಠದ ಷಡಕ್ಷರಿ ಸ್ವಾಮೀಜಿಯವರು ನೇತೃತ್ವದಲ್ಲಿ ಆ.13ರ ಬೆಳಗ್ಗೆ 8.30 ರಿಂದ ಸಂಜೆ 4ರವರೆಗೆ ಆಯೋಜಿಸಲಾಗಿದೆ. ಆಸಕ್ತರು ಪಾಲ್ಗೊಳ್ಳಬಹುದೆಂದು ತಿಳಿಸಿದರು.
ರೋಟರಿ ಮೈಸೂರು ಉತ್ತರ ಅಧ್ಯಕ್ಷ ಎಂ.ಕೆ.ನಂಜಯ್ಯ, ಹೆಚ್.ಕೆ.ಜಗದೀಶ್, ವಿರೂಪಾಕ್ಷ ಗೌಡ ಮತ್ತಿತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)