
ಕರ್ನಾಟಕಪ್ರಮುಖ ಸುದ್ದಿ
ಪಿಎಫ್ ಬಡ್ಡಿದರ ಇಳಿಕೆ: ಪರಿಷ್ಕೃತ ಬಡ್ಡಿದರ 2017 ಜ.1ರಿಂದ ಜಾರಿ
ಬೆಂಗಳೂರು: ಕಾರ್ಮಿಕರ ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು 8.65ಕ್ಕೆ ಇಳಿಕೆ ಮಾಡುವ ನಿರ್ಧಾರವನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಸೋಮವಾರ ಪ್ರಕಟಿಸಿದೆ. ಕಳೆದ ವರ್ಷ ಬಡ್ಡಿದರ ಶೇ.8.8ರಷ್ಟಿತ್ತು.
ಸೋಮವಾರ ಬೆಂಗಳೂರಿನಲ್ಲಿ ನಡೆದ ಕೇಂದ್ರೀಯ ವಿಶ್ವಸ್ಥ ಮಂಡಳಿ(ಸಿಬಿಟಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2009ರಿಂದ ಕಾರ್ಮಿಕರ ಭವಿಷ್ಯನಿಧಿ ಕಟ್ಟದೇ ಇರುವ ಬಾಕಿದಾರ ಉದ್ಯೋಗದಾತ ಸಂಸ್ಥೆಗಳಿಗೆ ಕೆಲ ರಿಯಾಯಿತಿಗಳನ್ನು ಸಿಬಿಟಿ ಪ್ರಸ್ತಾಪಿಸಿದೆ. ಕಳೆದ ವರ್ಷ ಶೇ.8.8 ಬಡ್ಡಿ ನೀಡಿದ್ದರಿಂದಾಗಿ ಉಳಿಕೆ ಮೊತ್ತ(ಸರ್ಪ್ಲಸ್) 1600 ಕೋಟಿಯಿಂದ 410 ಕೋಟಿಗೆ ಇಳಿದಿದೆ. ಹೀಗಾಗಿ ಬಡ್ಡಿ ದರ ತಗ್ಗಿಸಿದೆ.
ಪಿಎಫ್ ಬಡ್ಡಿದರವನ್ನು ಶೇ.8.65ಕ್ಕೆ ನಿಗದಿ ಮಾಡಲು ನಿರ್ಧರಿಸಲಾಗಿದ್ದು, ಪರಿಷ್ಕೃತ ಬಡ್ಡಿದರ 2017 ಜ.1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಕಾರ್ಮಿಕ ಇಲಾಖೆ ರಾಜ್ಯ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.