ಮನರಂಜನೆ

ಬರ್ತಡೇ ಪಾರ್ಟಿ ಬಳಿಕ ಆಸ್ಪತ್ರೆ ಸೇರಿದ ನಟಿ ಸರಾಖಾನ್

ಮುಂಬೈ,ಆ.9-ಹಿಂದಿ ಕಿರುತೆರೆ ನಟಿ ಸರಾಖಾನ್ ತಮ್ಮ 29ನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ.

ಆದರೆ ಬರ್ತಡೇ ಪಾರ್ಟಿ ಮುಗಿಯುವ ವೇಳೆ ಸರಾಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಭ್ರಮಾಚರಣೆಯಲ್ಲಿ ಸರಾಖಾನ್ ಸೇವಿಸಿದ್ದ ಆಹಾರ ವಿಷವಾದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿರುವ ಫೋಟೋವನ್ನ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಸರಾಖಾನ್, ಬರ್ತಡೇ ಪಾರ್ಟಿಯಲ್ಲಿ ಸೇವಿಸಿದ ಆಹಾರವೇ ಫುಡ್ ಪಾಯ್ಸನ್ ಆಗಿ ಪರಿವರ್ತನೆಯಾಗಿದೆ. ಹುಟ್ಟುಹಬ್ಬದ ದಿನ ಹೀಗೆ ಎಂಡ್ ಆಗುತ್ತೆ ಅಂತ ನಾನು ಭಾವಿಸಿರಲಿಲ್ಲ. ಹುಟ್ಟುಹಬ್ಬದ ಸಂಭ್ರಮ ನೆನಪಿನಲ್ಲಿ ಉಳಿಯುವಂತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇಂತಾ ಅನುಭವದ ಜೀವನದಲ್ಲಾಗ್ತಿರೋದು ಇದೇ ಮೊದಲು. ಸದ್ಯ ನಾನು ಆರೋಗ್ಯದಿಂದಿದ್ದೇನೆ ಅಂತ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸಿದ್ದಾರೆ.

ಸರಾಖಾನ್ ಪೋಸ್ಟ್ ನೋಡಿದ ಅಭಿಮಾನಿಗಳು ಆಕೆಗೆ ಹುಟ್ಟುಹಬ್ಬದ ಶುಭಾಶಯಗಳ ಜೊತೆಗೆ ಬೇಗನೆ ಗುಣಮುಖರಾಗಿ ಅಂತ ಹಾರೈಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮ ಆಸ್ಪತ್ರೆ ಸೇರುವುದರೊಂದಿಗೆ ಎಂಡ್ ಆಗಿರೋದು ಮಾತ್ರ ಸರಾಗೆ ನಿರಾಸೆಯನ್ನುಂಟು ಮಾಡಿದೆ. (ಎಂ.ಎನ್)

Leave a Reply

comments

Related Articles

error: