ಸುದ್ದಿ ಸಂಕ್ಷಿಪ್ತ

ವಿಜಯ ಬ್ಯಾಂಕಿನ ವತಿಯಿಂದ ನಾಣ್ಯ ವಿನಿಮಯ ಮೇಳ

ಹಾಸನ (ಆ.9): ಸರ್ವಜನರಿಗಾಗುತ್ತಿರುವ ನಾಣ್ಯದ ಅಭಾವ ಹಾಗೂ ಚಿಲ್ಲರೆ ಸಮಸ್ಯೆಯನ್ನು ಸರಿದೂಗಿಸಲು ನಗರದ ವಿಜಯ ಬ್ಯಾಂಕಿನ ವತಿಯಿಂದ ನಾಣ್ಯ ವಿನಿಮಯ ಮೇಳವನ್ನು ಎನ್.ಆರ್ ಸರ್ಕಲ್‍ನಲ್ಲಿ ಆಯೋಜಿಸಲಾಗಿತ್ತು.

ಈ ನಾಣ್ಯ ವಿನಿಮಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರೀಯ ಪ್ರಬಂಧಕರಾದ ಕೆ. ಆರ್ ಕಗದಳರವರು ಮಾರುಕಟ್ಟೆಯಲ್ಲಿರುವ ಚಿಲ್ಲರೆ ಸಮಸ್ಯೆಯನ್ನು ಪರಿಗಣಿಸಿ ಈ ಮೇಳವನ್ನು ಆಯೋಜಿಸಲಾಗಿದೆ ಹಾಗೂ 10 ರೂಪಾಯಿಯ ನಾಣ್ಯ ದೇಶಾದ್ಯಂತ ಚಲಾವಣೆಯಲ್ಲಿದ್ದು ಹಾಸನದ ಜನರು ನಿರ್ಭಿತಿಯಿಂದ ಚಲಾವಣೆಗೆ ಬಳಸಬಹುದು ಎಂದು ಕರೆ ನೀಡಿದರು.

ಇಂತಹ ಇನ್ನಷ್ಟು ಮೇಳಗಳನ್ನು ನಗರದ ವಿವಿಧೆಡೆ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಹಾಗೂ ಇದರ ಉಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ. (ಎನ್.ಬಿ)

Leave a Reply

comments

Related Articles

error: