ಪ್ರಮುಖ ಸುದ್ದಿಮೈಸೂರು

ಶೀಘ್ರದಲ್ಲೇ ಎಂಎಲ್‍ಸಿ, ಸಚಿವರ ಬಣ್ಣ ಬಯಲಾಗಲಿದೆ: ಬಿ.ಎಸ್.ವೈ ಭವಿಷ್ಯ

ಇನ್ನೆರಡು ಮೂರು ದಿನದಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಸಚಿವರ ಬಣ್ಣ ಬಯಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮೈಸೂರಿನಲ್ಲಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.

ನಾನು ಶಾಸ್ತ್ರ ಹೇಳುತ್ತಿಲ್ಲ, ಸತ್ಯ ಹೇಳುತ್ತಿದ್ದೇನೆ. ಇನ್ನು ಎರಡು ಮೂರು ದಿನ ಕಾದು ನೋಡಿ, ಎಲ್ಲವೂ ಬಯಲಾಗುತ್ತದೆ. ಕೊನೆಗೆ ಈ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರ ಬುಡಕ್ಕೆ ಬರಲಿದೆ. ನಾನು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಮುಂದೆ ಏನಾಗುತ್ತೆ ಎಂಬುದನ್ನು ನೀವೆ ಕಾದು ನೋಡಿ ಎಂದು ಅವರು ಹೇಳಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುವುದು ಖಚಿತ. ಮುಂದೆ ನಂಜನಗೂಡಿನಲ್ಲಿ ಬಿಜೆಪಿ ಜಯ ಗಳಿಸಲಿದೆ. ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ನಂಜನಗೂಡಿನಿಂದ ಸ್ಪರ್ಧಿಸಲ್ಲ. ಯಾಕೆ ಎಂದು ನಾನು ಕಾರಣ ತಿಳಿಸಲ್ಲ. ಕೆಲವೇ ದಿನಗಳಲ್ಲಿ ನಿಮಗೆ ಉತ್ತರ ಸಿಗಲಿದೆ ಎಂದು ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು.

ನಾನು ಮಾತನಾಡಿದರೆ ಸಂಸತ್‍ನಲ್ಲಿ ಭೂಕಂಪವಾಗುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಕೆಲವೇ ದಿನಗಳಲ್ಲಿ ರಾಹುಲ್ ಗಾಂಧಿ ಕುಟುಂಬದಲ್ಲೇ ಭೂಕಂಪವಾಗಲಿದೆ. ಯಾವ ಭೂಕಂಪ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು.

Leave a Reply

comments

Related Articles

error: