ಮನರಂಜನೆ

ಆ.20 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಪವನ್ ಒಡೆಯರ್-ಅಪೇಕ್ಷಾ ಪುರೋಹಿತ್

ಬೆಂಗಳೂರು,ಆ.9-ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಅವರ ವಿವಾಹ ಮಹೋತ್ಸವ ಆ.20 ರಂದು ನೆರವೇರಲಿದೆ.

ಬಾಗಲಕೋಟೆಯ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9.05 ಕ್ಕೆ ಮದುವೆ ನೆರವೇರಲಿದೆ.

ಪವನ್ ಒಡೆಯರ್ ಹಾಗೂ ಅಪೇಕ್ಷಾ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಾರಣ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು, ತಂತ್ರಜ್ಞರು ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ನಟ ಸಾರ್ವಭೌಮ’ ಚಿತ್ರದ ಶೂಟಿಂಗ್ ನಿಂದ ಬ್ರೇಕ್ ಪಡೆದಿರುವ ಪವನ್ ಒಡೆಯರ್ ಲಗ್ನಪತ್ರಿಕೆ ಹಂಚುವುದರಲ್ಲಿ ಬಿಜಿಯಾಗಿದ್ದಾರೆ.

‘ಗೋವಿಂದಾಯ ನಮಃ’, ‘ಗೂಗ್ಲಿ’, ‘ರಣವಿಕ್ರಮ’, ‘ಜೆಸ್ಸಿ’ ಹಾಗೂ ‘ನಟರಾಜ ಸರ್ವೀಸ್’ ಸಿನಿಮಾಗಳಿಗೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಅಪೇಕ್ಷಾ ಪುರೋಹಿತ್ ‘ಕಾಫಿ ತೋಟ’ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೇ ಕೆಲ ಧಾರಾವಾಹಿಗಳಲ್ಲಿಯೂ ಮಿಂಚಿದ್ದಾರೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಅವರ ನಿಶ್ಚಿತಾರ್ಥ ಬಾಗಲಕೋಟೆಯಲ್ಲಿ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು. ಇದೀಗ ಎಂಟು ತಿಂಗಳ ಬಳಿಕ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. (ಎಂ.ಎನ್)

 

Leave a Reply

comments

Related Articles

error: