ಮನರಂಜನೆ

ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್ ಖಾನ್

kareen-2ಕರೀನಾ ಕಪೂರ್-ಸೈಫ್ ಅಲಿ ಖಾನ್ ತಾರಾ ಜೋಡಿ ಗಂಡು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕರೀನಾ ತಂದೆ ರಂದೀಪ್ ಕಪೂರ್ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದು, ಮಗು ಮತ್ತು ಕರೀನಾ ಇಬ್ಬರು ಆರೋಗ್ಯದಿಂದಿದ್ದಾರೆ. ಈ ಸುದ್ದಿ ನಮ್ಮ ಕುಟುಂಬದವರೆಲ್ಲರಿಗೂ ಸಂತೋಷ ಹೊತ್ತುತಂದಿದೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ. ಕಪೂರ್ ಮತ್ತು ಖಾನ್‍ ಕುಟುಂಬದ ಎಲ್ಲ ಸದಸ್ಯರು ಆಸ್ಪತ್ರೆಯಲ್ಲಿದ್ದು, ಸಂಭ್ರಮ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಕೆಲ ಸೆಲೆಬ್ರೆಟಿಗಳು ಗರ್ಭಿಣಿಯರಾಗುತ್ತಿದ್ದಂತೆ ಕ್ಯಾಮೆರಾದಿಂದ ಆದಷ್ಟು ದೂರ ಸರಿಯಲು ಯತ್ನಿಸುತ್ತಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡುತ್ತಾರೆ. ಆದರೆ, ಕರೀನಾ ಕಪೂರ್ ಖಾನ್ ಇದಕ್ಕೆ ತದ್ವಿರುದ್ದವಾಗಿ ಫ್ಯಾಷನ್ ಶೋ ಒಂದರಲ್ಲಿ ಕ್ಯಾಟ್‍ವ್ಯಾಕ್ ಮಾಡುವ ಮೂಲಕ ಮತ್ತು ಹಲವಾರು ಫೋಟೋ ಶೂಟ್‍ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಾವು ಗರ್ಭಿಣಿಯಾಗಿರುವ ಸಂತಸವನ್ನು ಹಂಚಿಕೊಂಡು ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು.

kareena-3

Leave a Reply

comments

Related Articles

error: