ಮೈಸೂರು

ನೀರಿನ ಕಂದಾಯ ಪಾವತಿಸದಿದ್ದಲ್ಲಿ ಸಂಪರ್ಕ ಕಡಿತ : ಜೆ.ಜಗದೀಶ್ ಹೇಳಿಕೆ

mcc-2ಮೈಸೂರು ಮಹಾನಗರಪಾಲಿಕೆ ನೀರಿನ ಕಂದಾಯ ವಸೂಲಾತಿಗಾಗಿ ಈಗಾಗಲೇ ಮನೆಮನೆ ಅಭಿಯಾನ ನಡೆಸಿ ಕಂದಾಯ ವಸೂಲಾತಿಯನ್ನು ನಡೆಸಿತ್ತಲ್ಲದೇ ಯಾರು ಕಂದಾಯವನ್ನು ಭರಿಸುವುದಿಲ್ಲವೋ ಅಂಥಹವರ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ತಿಳಿಸಿತ್ತು. ಇದೀಗ ಹನ್ನೊಂದು ವಾಹನಗಳು ನೀರಿನ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸುವ ಹಾಗೂ ನೀರಿನ ಕಂದಾಯ ವಸೂಲಾತಿಯಲ್ಲಿ ತೊಡಗಿಸಿಕೊಂಡಿದ್ದು ಮಂಗಳವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಹಾನಗರಪಾಲಿಕೆ ಆಯುಕ್ತ ಜೆ.ಜಗದೀಶ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಈಗಾಗಲೇ ನೀರಿನ ಕಂದಾಯ ಪಾವತಿಸುವಂತೆ ತಿಳಿಸಲಾಗಿತ್ತು. ಆದರೆ  ಇನ್ನೂ 150 ಕೋಟಿ ರೂಪಾಯಿ ಹಣ ವಸೂಲಾಗಬೇಕಿದೆ. ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅಭಿಯಾನ ನಡೆಸುತ್ತಿದ್ದೇವೆ. ಇಂದಿನಿಂದ ಎಲ್ಲ ಕಡೆ ತೆರಳಿ ನೀರಿನ ಅನಧಿಕೃತ  ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು ಮತ್ತು ನೀರಿನ ಕಂದಾಯವನ್ನು ವಸೂಲಾತಿಯನ್ನು ಮಾಡಲಾಗುವುದು. ಹಣ ಈಗಲೂ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಿಳಿಸಿದರು.

ಹನ್ನೊಂದು ವಾಹನಗಳೂ ನಗರದ ಎಲ್ಲ ಕಡೆ ತೆರಳಿ ಬಾಕಿ ಇರುವ ಕಂದಾಯವನ್ನು ವಸೂಲು ಮಾಡಲಿದೆ.

ಈ ಸಂದರ್ಭ ಮಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್ ಹಾಗೂ ಪಾಲಿಕೆಯ ಕೆಲವು ಸದಸ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: