
ಪ್ರಮುಖ ಸುದ್ದಿ
ಹಿಮಾಲಯ ಪರ್ವತ ಶ್ರೇಣಿಗಳನ್ನೇರಿ ಸಾಹಸ ಮೆರೆದ ಅಪ್ಪಂಡೆರಂಡ ಯಶ್ವಂತ್ ಕಾಳಪ್ಪ
ರಾಜ್ಯ(ಮಡಿಕೇರಿ)ಆ.9:- ಟ್ರೈಂಪ್ ಮೋಟಾರ್ ಸೈಕಲ್ಸ್ ಕಂಪನಿಯ ಟ್ರೈಂಪ್ ಪ್ರಾಯೋಜಿತ ರೈಡಿಂಗ್ನಲ್ಲಿ ಭಾರತದ 15 ಜನರ ಪೈಕಿ ದಕ್ಷಿಣ ಕೊಡಗಿನ ಕಂಡಂಗಾಲದವರಾದ, ಬೆಂಗಳೂರಲ್ಲಿ ನೆಲೆಸಿರುವ ಅಪ್ಪಂಡೆರಂಡ ಯಶ್ವಂತ್ ಕಾಳಪ್ಪ ಭಾಗಿಯಾಗಿ ಹಿಮಾಲಯ ಪರ್ವತ ಶ್ರೇಣಿಗಳನ್ನೇರಿ ಸಾಹಸ ಮೆರೆದಿದ್ದಾರೆ.
ಟ್ರೈಂಪ್ ಟೈಗರ್ ಬೈಕ್ಹೊಂದಿರುವ ಯಶ್ವಂತ್ ಕಾಳಪ್ಪ, ಬೈಕಿನಲ್ಲಿ 13 ದಿನಗಳ ಕಾಲ ಹಿಮಾಲಯ ಪರ್ವತ ಶ್ರೇಣಿಯಲ್ಲೆಲ್ಲ ಸುತ್ತಾಡಿ 18,380 ಅಡಿಯ ವಿಶ್ವದ ಅತೀ ಎತ್ತರವಾದ ಕಾರ್ದುಂಗ್ಲವೆಂಬ ಪರ್ವತ ಶ್ರೇಣಿಯ ತುತ್ತ ತುದಿಗೇರುವ ಮೂಲಕ ಸಾಹಸವನ್ನು ಮೆರೆದಿದ್ದಾರೆ.
ಮೊದಲ ಹಂತದಲ್ಲಿ ಚಂಡೀಗಡ್ನಿಂದ ಪ್ರಾರಂಭಿಸಿ ಸಿಮ್ಲಾ, ಸಂಗ್ಲ, ಚಿತ್ಕುಲ್, ನಾಕೊ, ಪಿನ್ವ್ಯಾಲಿ, ಕಾಜ, ಗ್ರಾಫು ತಲುಪಿ, ಎರಡನೇ ಹಂತದಲ್ಲಿ ಗ್ರಾಫುವಿನಿಂದ ಯಶ್ವಂತ್ ಹಾಗು ಬೆಂಗಳೂರಿನ ರೈಡರ್ ಇಬ್ಬರೆ ಕೀಲಾಂಗೆ ತಲುಪಿದರು. ಕಾರಣಾಂತರದಿಂದ ಬೆಂಗಳೂರಿನ ರೈಡರ್ ತನ್ನ ರೈಡನ್ನು ಮೊಟಕುಗೊಳಿಸಿ ಹಿಂದಿರುಗಿದರು.
ಅಲ್ಲಿಂದ ಯಶ್ವಂತ್ ಕಾಳಪ್ಪ ಒಬ್ಬರೆ, ಕಾರ್ದುಂಗ್ಲ, ಹುಂದೀರ್, ದಿಸ್ಕಿತ್, ಕಾರ್ಗಿಲ್, ಶ್ರೀನಗರ್, ಪತಾಂಗ್ಕೋಟ್, ಕೊನೆಯ ಹಂತದಲ್ಲಿ ಪತಾನ್ಕೋಟ್, ಅಟಾರಿ ಬೋರ್ಡರ್, ಜಲಂದರ್, ಚಂಡೀಗಡ್ಗೆ ಹಿಂತಿರುಗಿದರು. ಯಶ್ವಂತ್ ತನ್ನ ಟ್ರೈಂಪ್ ಟೈಗರ್ ಬೈಕ್ನಲ್ಲಿ ಒಟ್ಟು 2800 ಕಿ.ಮೀ. ಕ್ರಮಿಸಿದರು.
ದಿನಕ್ಕೆ ಸುಮಾರು 8ರಿಂದ 13ಗಂಟೆಗಳು ರೈಡ್ನಲ್ಲಿದ್ದು, ಬೆಳಿಗ್ಗೆ ಬಿಸಿಲಿನ ತಾಪವಾದರೆ, ರಾತ್ರಿಯಾಗುತ್ತಲೆ ಕೊರೆಯುವ ಚಳಿ ಇರುತ್ತಿತ್ತೆಂದು ಯಶ್ವಂತ್. ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಬರೀ ಮಾನವ ನಿರ್ಮಿತ ಸಣ್ಣಪುಟ್ಟ ರಸ್ತೆಗಳು ಒಂದೆಡೆಯಾದರೆ ಬೆಟ್ಟಗಳ ನಡುವೆ ರೈಡ್ ಮಾಡಬೇಕಿದ್ದರೆ ಕಲ್ಲಿನ ಕಿರಿದಾದ ರಸ್ತೆಗಳು ತುಂಬಿ ಹರಿವ ನದಿಗಳ ಮಧ್ಯೆ ಬೈಕ್ನಲ್ಲಿ ಸಾಗಬೇಕಾಯಿತೆಂದು ಅನುಭವವನ್ನು ಹಂಚಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಹಸಿಕ ರೈಡ್ಗಳನ್ನು ಮಾಡುವ ಉದ್ದೇಶವನ್ನು ಯಶ್ವಂತ್ ಹೊಂದಿದ್ದಾರೆ. ತಂದೆ ಅಪ್ಪಂಡೆರಂಡ ಕಾಳಪ್ಪ ಹಾಗೂ ಪತ್ನಿ ಅನಿತ ಯಶ್ವಂತ್ ನನಗೆ ಪೂರ್ಣ ಸಹಕಾರ ನೀಡುತ್ತಾರೆಂದು ಯಶ್ವಂತ್ ಹೇಳುತ್ತಾರೆ. (ಕೆಸಿಐ,ಎಸ್.ಎಚ್)