ಕರ್ನಾಟಕಪ್ರಮುಖ ಸುದ್ದಿಮೈಸೂರು

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ : ಯಡಿಯೂರಪ್ಪ ಭವಿಷ್ಯ

ಮುಂದಿನ ಚುನಾವಣೆಯಲ್ಲಿ ಮೈಸೂರಿನಲ್ಲಿ ಬಿಜೆಪಿ ಗೆಲುವು ಖಚಿತ  ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ನಂಜನಗೂಡು ಉಪಚುನಾವಣೆಯಲ್ಲಿ ಸಚಿವ ಮಹದೇವಪ್ಪ ಮಗ ಸುನಿಲ್ ಬೋಸ್ ಸ್ಪರ್ಧಿಸುವುದಿಲ್ಲ. ಯಾಕೆ ಸ್ಪರ್ಧಿಸುವುದಿಲ್ಲ ಎನ್ನುವುದನ್ನು ನಾನು ಹೇಳುವುದಿಲ್ಲ.  ಯಾಕಂತ ಎಲ್ಲರಿಗೂ ಗೊತ್ತಾಗಲಿದೆ ಎಂದು ತಿಳಿಸಿದರು. ಮೈಸೂರಿನಲ್ಲಿ ಬಿಜೆಪಿ ಗೆಲುವು ಖಚಿತವಾಗಿದೆ ಎಂದು ತಿಳಿಸಿದರು.

ನಾನು ಮಾತನಾಡಿದರೆ ಸಂಸತ್ ನಲ್ಲಿ ಭೂಕಂಪ ಆಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರಲ್ಲ ಎಂಬ ಪ್ರಶ್ನೆಗೆ ಸದ್ಯದಲ್ಲೇ ರಾಹುಲ್ ಗಾಂಧಿಯವರ ಮನೆಯಲ್ಲೇ ಭೂಕಂಪವಾಗಲಿದೆ. ಅದು ಯಾವ ಭೂಕಂಪ ಎನ್ನುವುದು ಎಲ್ಲರಿಗೂ ತಿಳಿಯಲಿದೆ. ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ತಾನೇ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಲು ಪ್ರಯತ್ನಿಸಿದರು. ಆದರೆ ಯಾರೂ ಚಪ್ಪಾಳೆ ಹಾಕಲಿಲ್ಲ. ಬೆಳಗಾವಿಯ ಕಾಂಗ್ರೆಸ್ ಸಮಾವೇಶಕ್ಕೆ ಸೇರಿದ್ದು ಕೇವಲ 30ಸಾವಿರ ಜನ ಮಾತ್ರ. ಇದನ್ನೇ ಲಕ್ಷಾಂತರ ಜನ ಸೇರಿಸಿದ್ದೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಎಂದರು.

ಕೊಡಗಿನ ಗಿರಿಜನರ ಹೋರಾಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯ ಸರ್ಕಾರಕ್ಕೆ ಗಿರಿಜನರ ವಿಚಾರದಲ್ಲಿ ಆಸಕ್ತಿ ವಹಿಸುವಷ್ಟು ಮಾನ ಮರ್ಯಾದೆ ಇಲ್ಲ. ಜನರು ಅಲ್ಲಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸುಮ್ಮನೆ ಕುಳಿತು ನೋಡುತ್ತಿರುವುದು ನಾಚಿಕೆಗೇಡು. ನಾನು ಇಂದೇ ಕೊಡಗಿಗೆ ತೆರಳಿ ಜನರ ಸಮಸ್ಯೆಯನ್ನು ಆಲಿಸುತ್ತೇನೆ. ಸರ್ಕಾರ ಸಮಸ್ಯೆ ಬಗೆಹರಿಸದಿದ್ದರೆ ನಾವು ಉಗ್ರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ಬಿಜೆಪಿಯ ಕೆಲವು ಮುಖಂಡರು ಯಡಿಯೂರಪ್ಪ ಜೊತೆಗಿದ್ದರು.

Leave a Reply

comments

Related Articles

error: