ಪ್ರಮುಖ ಸುದ್ದಿಮೈಸೂರು

ಸಚಿವ ಸಾ.ರಾ. ಮಹೇಶ್ ಹುಟ್ಟು ಹಬ್ಬದ ಪ್ರಯುಕ್ತ ಅನ್ನ ಸಂತರ್ಪಣೆ

ಮೈಸೂರು,ಆ.10:-  ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹುಟ್ಟು ಹಬ್ಬದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಭೈರವ ಗ್ರೂಪ್ಸ್ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಬೆಟ್ಟಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಿದರು. ಭೈರವ್ ಗ್ರೂಪ್ಸ್ ಮಾಲೀಕ  ಭೈರವ ಕುಮಾರ್ ಅವರ ನೇತೃತ್ವದಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದು, ಬೆಳಿಗ್ಗೆ5:30 ರಿಂದ 8 ರಾತ್ರಿ ವರೆಗೆ ನಡೆಯಲಿದೆ. ಉಪ್ಪಿಟ್ಟು,ಕೇಸರಿ ಬಾತ್ ,ಶಾವಿಗೆ ಬಾತ್,ವಾಂಗಿ ಬಾತ್,ಬಿಸಿಬೆಳೆ ಬಾತ್,ಮೆಂತೆ ಸೊಪ್ಪಿನ ಬಾತ್,ಟಮೋಟಾ ಬಾತ್. ಒಂದು ಲಕ್ಷ ಲಡ್ಡುವನ್ನು ಪ್ರಸಾದ ರೂಪದಲ್ಲಿ ಭಕ್ತರಿಗಾಗಿ ವಿನಿಯೋಗಿಸುತ್ತಿದ್ದು, 80 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವೈಭವಿ ಕ್ಯಾಂಟೀನ್ ರಾಕೇಶ್ ಅಡುಗೆ ಭಟ್ಟರಿಂದ ಭೋಜನ ಸಿದ್ಧಗೊಂಡಿದ್ದು,200 ಮಂದಿ ಭೋಜನ ತಯಾರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: