ಕರ್ನಾಟಕ

ಸ್ವಾತಂತ್ರ್ಯ ದಿನಾಚರಣೆ: 93 ಖೈದಿಗಳಿಗೆ ಬಿಡುಗಡೆ ಭಾಗ್ಯ

ಬೆಂಗಳೂರು,ಆ.10-ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಸನ್ನಡೆತೆಯ ಆಧಾರದ ಮೇಲೆ 93 ಖೈದಿಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದ ವಿವಿಧ ಜೈಲುಗಳಿಂದ 93 ಖೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ವಿಚಾರವನ್ನು ಸಭೆಯ ಬಳಿಕ ಸಚಿವ ಬಂಡೆಪ್ಪ ಕಾಶೆಂಪುರ ಮಾಧ್ಯಮಗಳಿಗೆ ತಿಳಿಸಿದರು. ರಾಜ್ಯಪಾಲರಿಗೆ ಕುರಿತು ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಕೆಎಎಸ್ ಅಧಿಕಾರಿಗಳಿಗೆ ಸೂಪರ್ ಸ್ಕೇಲ್ಗೆ ಪದೋನ್ನತಿ ನೀಡಲು ಇರುವ ಸೇವಾನುಭವ ಮಾನದಂಡವನ್ನು ಸದ್ಯದ 14 ವರ್ಷಗಳಿಂದ 13 ವರ್ಷಗಳಿಗೆ ಹಾಗೂ ಸೂಪರ್ ಟೈಂ ಸ್ಕೇಲ್ಗೆ ಪದೋನ್ನತಿ ನೀಡಲು 16 ವರ್ಷಗಳಿಂದ 15 ವರ್ಷಕ್ಕೆ ಇಳಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ. ವಸತಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ 10.36 ಕೋಟಿ ರೂ. ವೆಚ್ಚದಲ್ಲಿ ಶೂ, ಸಾಕ್ಸ್, ಟೈ ಮತ್ತು ಬೆಲ್ಟ್ ಖರೀದಿಸಲು ಒಪ್ಪಿಗೆ ನೀಡಲಾಗಿದೆ. (ಎಂ.ಎನ್)

Leave a Reply

comments

Related Articles

error: