ಮೈಸೂರು

ಡಾ.ಎಸ್.ಬಿ. ರುದ್ರಸ್ವಾಮಿ ಅವರಿಗೆ ಕಾಮನ್‍ವೆಲ್ತ್ ಪ್ರೊಫೆಷನಲ್ ಫೆಲೋಷಿಪ್ ಪ್ರದಾನ

ಜೆಎಸ್‍ಎಸ್‍ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ(ಎಸ್‍ಜೆಸಿಇ) ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಎಸ್.ಬಿ. ರುದ್ರಸ್ವಾಮಿ ಅವರಿಗೆ ಯುನೈಟೆಡ್ ಕಿಂಗ್‍ಡಮ್‍ನ ಪ್ರತಿಷ್ಠಿತ ‘ಕಾಮನ್‍ವೆಲ್ತ್ ಪ್ರೊಫೆಷನಲ್ ಫೆಲೋಷಿಪ್-2016-17’ ಪ್ರದಾನವಾಗಿದೆ.

ಡಾ.ರುದ್ರಸ್ವಾಮಿ ಅವರು 2015ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ನಿಂದ ಮೈಕ್ರೋಎಲೆಕ್ಟ್ರಾನಿಕ್ಸ್ ಅಂಡ್ ನ್ಯಾನೋಟೆಕ್ನಾಲಜಿ ಕ್ಷೇತ್ರದಲ್ಲಿ ಪಿಎಚ್‍ಡಿ ಪದವಿ ಪಡೆದಿರುತ್ತಾರೆ. ಕರ್ನಾಟಕ ಸರಕಾರದ ಬೋರ್ಡ್ ಆಫ್ ಐಟಿ ಎಜುಕೇಷನ್ ಸ್ಟ್ಯಾಂಡರ್ಡ್, ಐಇಇಇ ಇಂಟರ್‍ನ್ಯಾಷನಲ್ ಸಿಂಪೋಸಿಯಮ್ ಆನ್‍ ಫಿಸಿಕ್ಸ್ ಅಂಡ್ ಸೈನ್ಸರ್ಸ್ ಟೆಕ್ನಾಲಜಿ ಹಾಗೂ ಐಇಇಇ- ಉತ್ತರಪ್ರದೇಶದ ವತಿಯಿಂದ ಮೂರು ಬಾರಿ ‘ಬೆಸ್ಟ್ ಡಾಕ್ಟರಲ್ ಥೀಸಿಸ್ ಅವಾರ್ಡ್ಸ್’ ಪ್ರಶಸ್ತಿಗಳನ್ನು ಕೂಡ ಪಡೆದಿರುತ್ತಾರೆ.

ಜೆಎಸ್‍ಎಸ್‍ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ(ಎಸ್‍ಜೆಸಿಇ) ಉಪ ಕುಲಪತಿಗಳು, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಡಾ. ರುದ್ರಸ್ವಾಮಿ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ.

Leave a Reply

comments

Related Articles

error: