ಕ್ರೀಡೆ

ಎರಡನೇ ಟೆಸ್ಟ್ ಪಂದ್ಯ: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

ಲಂಡನ್‌,ಆ.10-ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದೆ.

ಲಾಡ್ಸ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಗುರುವಾರವೇ ಆರಂಭವಾಗಬೇಕಿತ್ತು. ಆದರೆ ಮೊದಲ ದಿನದಾಟ ಮಳೆಯಿಂದಾಗಿ ಟಾಸ್ ಕೂಡ ಕಾಣದೆ ಅಂತ್ಯಗೊಂಡಿತು. ಹೀಗಾಗಿ ಪಂದ್ಯ ನಾಲ್ಕು ದಿನಗಳ ಟೆಸ್ಟ್ ಪಂದ್ಯವಾಗಿದೆ.

ಟೀಂ ಇಂಡಿಯಾದಲ್ಲಿ ಪ್ರಮುಖವಾಗಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದು, ಚೇತೇಶ್ವರ ಪೂಜಾರ ಹಾಗೂ ಕುಲ್ದೀಪ್ ಯಾದವ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇವರಿಗಾಗಿ ಶಿಖರ್ ಧವನ್ ಹಾಗೂ ಉಮೇಶ್ ಯಾದವ್ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.

ಅತ್ತ ಆತಿಥೇಯ ಇಂಗ್ಲೆಂಡ್ ತಂಡದಲ್ಲಿ ಬೆನ್ ಸ್ಟೋಕ್ಸ್ ಹಾಗೂ ಡೇವಿಡ್ ಮಲನ್ ಸ್ಥಾನಗಳಿಗೆ ಕ್ರಿಸ್ ವೋಕ್ಸ್ ಹಾಗೂ ಒಲ್ಲಿ ಪಾಪ್ ಆಯ್ಕೆಯಾಗಿದ್ದಾರೆ. ಪೈಕಿ ಪಾಪ್ ಪಾಲಿಗಿದು ಚೊಚ್ಚಲ ಪಂದ್ಯವಾಗಿದೆ.

ಎಜ್ಬಾಸ್ಟನ್ನಲ್ಲಿ ನಡೆದ ಮೊದಲ ಟೆಸ್ಟ್ಪಂದ್ಯದಲ್ಲಿ ಭಾರತ ತಂಡ 31 ರನ್ಗಳ ಅಂತರದಲ್ಲಿ ಸೋಲುಂಡಿತು. ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದ ಮುನ್ನಡೆಗಳಿಸಿತ್ತು. ಇದೀಗ 2ನೇ ಟೆಸ್ಟ್ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಆತಿಥೇಯರಿಗೆ ತಿರುಗೇಟು ನೀಡುವ ತವಕದಲ್ಲಿದೆ. (ಎಂ.ಎನ್)

Leave a Reply

comments

Related Articles

error: