ಮೈಸೂರು

ಶೋಷಿತರು, ದಮನಿತರು,ಅವಕಾಶ ವಂಚಿತರೆಲ್ಲರೂ ದಲಿತರೆ : ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಮತ

ಮೈಸೂರು,ಆ.10:- ದಲಿತ ಎನ್ನುವುದು ಒಂದು ಅವಸ್ಥೆಯಾಗಿದ್ದು, ಶೋಷಿತರು, ದಮನಿತರು, ಅವಕಾಶ ವಂಚಿತರು ಅವರೆಲ್ಲರೂ ದಲಿತರೇ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ರಾಣಿಬಹದ್ದೂರ್ ಸಭಾಂಗಣದಲ್ಲಿಂದು ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಿತಿ ವತಿಯಿಂದ ನಡೆದ ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅರವಿಂದ ಮಾಲಗತ್ತಿ ಅವರು ಸೀಮಾತೀತರು. ಅದಕ್ಕೆ ಎರಡು ಉಕ್ತಿ ಸ್ಮ,ರಿಸುತ್ತೇನೆ. ಕುಲಸೀಮೆಯಿಲ್ಲದ ನಿಸ್ಸೀಮ, ಸೀಮಾಪುರುಷ ಎಂದು ಬಣ್ಣಿಸಿದರು. ಆಧುನಿಕ ಕನ್ನಡ ಸಾಹಿತ್ಯ ಒಂದು ತಿರುವಿನಲ್ಲಿದೆ. ಆ ತಿರುವಿನ ಹರಿಕಾರರಲ್ಲೊಬ್ಬರು ಅರವಿಂದ ಮಾಲಗತ್ತಿ. ಕನ್ನಡದ ದಲಿತ ಸಾಹಿತ್ಯದ ದೈತ್ಯ ಎಂದೂ ಕರೆಯಬಹುದು. ದಲಿತ ಎಂಬುದು ವಿಶೆಷಣ. ಅವರ ಮುಖ್ಯ ನೆಲೆಯನ್ನು ನಿರ್ದೇಶಿಸಲು ಕೂಡ ಬಿಟ್ಟು ನೋಡಬಹುದು. ಬಿಟ್ಟು ನೋಡಿದರೂ ಕೂಡ ಅವರು ದೈತ್ಯರಾಗಿಯೇ ಕಾಣಿಸುತ್ತಾರೆ. ಸಾರ ಸತ್ವವನ್ನು ಹೀರಿ ಬೆಳೆದಿದ್ದಾರೆ. ಬಹುಮುಖ ಬುದ್ಧಿ, ಪ್ರತಿಭೆಯನ್ನು ಹೊಂದಿದ್ದು, ವಿಶೇಷ ಉಲ್ಲೇಖನೀಯ. ಸಾಹಿತ್ಯವನ್ನು ಸಾಹಿತ್ಯಿಕಿ, ಸಾಮಾಜಿಕ, ಸಾಂಸ್ಕೃತಿಕ ಸ್ತರಗಳಲ್ಲಿ ತೆರೆದಿದ್ದಾರೆ. ಬರೆದಿದ್ದಾರೆ. ಮೂಕನಿಗೆ ಬಾಯಿ ಬಂದಾಗ ಕವನ ಸಂಕಲನ ಬರೆಯುವ ಮೂಲಕ ಬಂದಾಗಿದ್ದ ಬಾಯಿ ತೆರೆಸಿದ್ದಾರೆ. ಮೂಕರಿಗೆ ನಾಲಿಗೆ ನೀಡಿ ಮಾತಾದರು. ನಾನೊಮ್ಮೆ ಕೇಳಿದ್ದೆ ಸರ್ಕಾರ  ಸಾಹಿತಿಗಳಿಗೆ ಪೊಲೀಸ್ ಭದ್ರತೆ ನೀಡುತ್ತಾರೆ ನಿಮಗೆ ಬೇಡವೇ ಎಂದು ಅದಕ್ಕೆ ಅವರು ನನಗದೆಲ್ಲ ಬೇಡ  ಎಂದಿದ್ದರು.  ಅದಕ್ಕೆ ನಾನು ತಮಾಷೆಯಾಗಿ ಹೇಳಿದ್ದೆ. ಮನೆಯಲ್ಲಿ ಶ್ರೀಮತಿಯವರೇ ಪೊಲೀಸ್ ಅಧಿಕಾರಿಯಿರುವಾಗ ಭದ್ರತೆ ಏಕೆ ಎಂದಿದ್ದೆ ಎಂದರು. ನನ್ನ ಪ್ರಕಾರ ದಲಿತ ಎಂಬುದು ಒಂದು ಅವಸ್ಥೆ. ಶೋಷಿತರೂ ದಮನಿತರೂ ಅವಕಾಶ ವಂಚಿತರೂ ದಲಿತರೇ ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಡಾ.ಅರವಿಂದ ಮಾಲಗತ್ತಿಯವರ ಕವಿತೆಗಳ ಗಾಯನ ಹಾಗೂ ನೃತ್ಯರೂಪಕ ‘ಗಿಳಿ ಕುಂತು ಕೇಳ್ಯಾವೋ’  ಧ್ವನಿ ಮುದ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಅರವಿಂದ ಮಾಲಗತ್ತಿಯವರ ಸಾಹಿತ್ಯ ಊರಿನ ಮಧ್ಯದಲ್ಲಿ ನಿಂತು ಇಡೀ ಸಮಾಜವನ್ನು ಬದಲಾಯಿಸುವ ಕೆಲಸ ಮಾಡಬೇಕಿದೆ ಎಂದರು. 21ನೇ ಶತಮಾನದಲ್ಲಿ ಊರಲ್ಲಿದ್ದ ಪ್ರತಿಭಾವಂತರು ಕೇರಿಯಲ್ಲಿದ್ದಾರೆ. ಒಂದು ರಾಷ್ಟ್ರದೊಳಗಡೆ ದೊಡ್ಡ ಸಮುದಾಯ ಪ್ರತ್ಯೇಕವಾಗಿ ಬದುಕುವ ವ್ಯವಸ್ಥೆ ಇದೆ ಅಂದರೆ ಅದಕ್ಕಿಂತ ಅಪಾಯಕಾರಿ ಬೆಳವಣಿಗೆ ಇನ್ನೊಂದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಮೈಸೂರು ವಿವಿ ಕುಲಪತಿ ಪ್ರೊ.ಟಿ.ಕೆ.ಉಮೇಸ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ.ಎನ್.ಎಂ.ತಳವಾರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: