
ಮೈಸೂರು
ಶಾರದಾದೇವಿಯವರ ಜನ್ಮೋತ್ಸವ ಆಚರಣೆ
ಮೈಸೂರಿನ ಯಾದವಗಿರಿ ಶ್ರೀರಾಮಕೃಷ್ಣ ಆಶ್ರಮದಲ್ಲಿ ಶ್ರೀಮಾತೆ ಶಾರದಾದೇವಿಯವರ 164ನೇ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ರಾಮಕೃಷ್ಣ ಆಶ್ರಮದಲ್ಲಿ ಮಂಗಳವಾರ ಶಾರದಾದೇವಿಯವರ 164ನೇ ಜನ್ಮದಿನದ ಪ್ರಯುಕ್ತ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ದೇವಿಸೂಕ್ತ ಮತ್ತು ಆರತಿ, ಪೂಜೆ, ಲಲಿತಸಹಸ್ರನಾಮ, ಭಜನೆ, ಗ್ರಂಥವಾಚನ, ಆರತಿ, ಹೋಮ, ಪ್ರಸಾದ ವಿನಿಯೋಗ ನಡೆಯಿತು. ನೂರಾರು ಭಕ್ತಾದಿಗಳು ಪಾಲ್ಗೊಂಡು ಪುನೀತರಾದರು.
ಸಾಯಂಕಾಲ ಶ್ರೀಮಾತಾ ಸಂವಿತ್ ಭಜನಾ ಮಂಡಳಿ ಅವರಿಂದ ಭಜೆನ, ಶ್ರೀಶಾರದಾದೇವಿ ಕುರಿತು ಕನ್ನಡದಲ್ಲಿ ಪ್ರವಚನ ಸಂಸ್ಥೆಯ ಅಧ್ಯಕ್ಷ ಸ್ವಾಮಿ ಆತ್ಮಜ್ಞಾನಂದ ನೇತೃತ್ವದಲ್ಲಿ ನಡೆಯಲಿದೆ.