ಸುದ್ದಿ ಸಂಕ್ಷಿಪ್ತ

ಆ.12ರಂದು ಗ್ರಾ.ಪಂ ನೌಕರರ ಸಮಾವೇಶ

ಮೈಸೂರು,ಆ.10 : ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ವತಿಯಿಂದ ಗ್ರಾ.ಪಂ. ನೌಕರರ ಜಿಲ್ಲಾ ಮಟ್ಟದ ಸಮಾವೇಶವನ್ನು ಮಹಾತ್ಮ ಗಾಂಧಿ ರಸ್ತೆಯ ಹೋಟೆಲ್ ಬ್ಲೂ ಪಿಕಾಕ್ ಸಭಾಂಗಣದಲ್ಲಿ ಆ.12ರಂದು ಆಯೋಜಿಸಿದೆ.

10.30 ರಿಮದ ನಡೆಯುವ ಸಮಾವೇಶಕ್ಕೆ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಚಾಲನೆ ನೀಡುವರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಜಯರಾಮ ಇರುವರು. ಜಿಲ್ಲಾಧ್ಯಕ್ಷ ಕೆ.ಬಸವರಾಜು ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ದಿನೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: