ಮೈಸೂರು

ಭೀಮನ ಅಮಾವಾಸ್ಯೆ ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ನಾಳೆ

ಮೈಸೂರು,ಆ.10 : ಪ್ರಧಾನಿ ನರೇಂದ್ರ ಮೋದಿಯವರೆ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಆಶಿಸಿ ಸ್ಪಂದನ ಗ್ರೂಪ್ಸ್ ವತಿಯಿಂದ ಭೀಮನ ಅಮಾವಾಸ್ಯೆಯಂದು ಲಷ್ಕರ್ ಮೊಹಲ್ಲಾದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗೂ ಮಹಾಪೂಜೆಯನ್ನು ನಾಳೆ (11) ಬೆಳಗ್ಗೆ 7 ಗಂಟೆಯಿಂದ ನಡೆಯಲಿದೆ.

ಇದು 3 ಅಮಾವಾಸ್ಯೆಗಳಂದು ನಡೆಯುವ ಪೂಜೆಯಾಗಿದೆ. ಮೊದಲ ಪೂಜೆಯನ್ನು ನಾಳೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಸಚಿವರಾದ ಲಕ್ಷ್ಮಣ್ ಸವದಿ, ನಾರಾಯಣ ಸ್ವಾಮಿ ಸಂಸದ ಪ್ರತಾಪ ಸಿಂಹ, ಶಾಸಕರಾದ ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಜೀವ್ ನಂದೀಶ್ ಪ್ರೀತಮ್, ಎಂ.ಸತೀಶ್, ರಾಜೇಶ್ ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: