ಸುದ್ದಿ ಸಂಕ್ಷಿಪ್ತ
ರೋಟರಿ ದತ್ತ ಶಿಕ್ಷಕ ಪ್ರಶಸ್ತಿ : ಅರ್ಜಿ ಆಹ್ವಾನ
ಮೈಸೂರು,ಆ.10 : ರೋಟರಿ ಮೈಸೂರು ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆದರ್ಶ ಶಿಕ್ಷಕರಿಗೆ ರೋಟರಿ ದತ್ತ ಶಿಕ್ಷಕರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಪ್ರಾಥಮಿಕ ಶಾಲಾ ಶಿಕ್ಷಕರು, ಕನಿಷ್ಠ 15 ವರ್ಷ ಸೇವೆ ಸಲ್ಲಿಸಿದವರು, 5 ವರ್ಷ ಬೋಧನಾ ಅನುಭವಿಗಳು, ಆಸಕ್ತ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಆಯಾಯ ಶಾಲೆಯ ಮುಖ್ಯೋಪಾಧ್ಯಯರ ಮೂಲಕವೇ ಸಲ್ಲಿಸಬೇಕು. ನಾಮ ಪತ್ರದೊಂದಿಗೆ ಸ್ವವಿವರ, ವೈಯುಕ್ತಿಕ ಸಾಧನೆ ಕೊಡುಗೆ, ವಿವರಗಳೊಂದಿಗೆ ಇತ್ತೀಚಿನ ಪಾಸ್ ಪೋರ್ಟ್ ನೊಂದಿಗೆ ಆ.25ರೊಳಗೆ ರೋಟರಿ ಮೈಸೂರು, 1/ಎ, ಜೆಎಲ್ ಬಿ ರಸ್ತೆ, ಮೈಸೂರು ಇಲ್ಲಿಗೆ ಸಲ್ಲಿಸಬಹುದು. ವಿವರಗಳಿಗೆ ದೂ.ಸಂ. 0821 4247823, 9448305562 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)