ಮೈಸೂರು

ಆ.12 ರಿಂದ ಸುತ್ತೂರು ಮಠದಲ್ಲಿ ಶ‍್ರಾವಣ ಮಾಸದ ವಿಶೇಷ ಪೂಜೆ : ಪ್ರವಚನ

ಮೈಸೂರು,ಆ.10 : ಚಾಮುಂಡಿ ತಪ್ಪಲಿನಲ್ಲಿರುವ ಸುತ್ತೂರಿನ ಶಾಖಾ ಮಠದಲ್ಲಿ ಶ್ರಾವಣಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಕಾರ್ಯಕ್ರಮಗಳು ಆ.12 ರಿಂದ ಆರಂಭವಾಗಲಿವೆ.

ಅಂದು ಸಂಜೆ 6 ಗಂಟೆಗೆ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಹುಣಸೂರು ತಾಲ್ಲೂಕು ಗಾವಡಗೆರೆ ಓಂ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀನಟರಾಜ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಉದ್ಘಾಟಿಸುವರು. ಆದಾಯ ಮತ್ತು ತೆರಿಗೆ ಇಲಾಖೆ ಜಂಟಿ ಆಯುಕ್ತ ಡಿ.ಕಿರಣ್ ಅವರು ರಾಜೇಂದ್ರ ಗುರು ವಚನಗೀತಾಂಜಲಿ ಕೃತಿ ಬಿಡುಗಡೆಗೊಳಿಸುವರು.

ಸೆ.10ರವರೆಗೆ ಪ್ರತಿನಿತ್ಯ ಬೆಳಗ್ಗೆ ರುದ್ರಾಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು, ನಂತರ ಸಂಜೆ 6 ರಿಂದ 6.30ರವರೆಗೆ ಸಾಮೂಹಿಕ ಪ್ರಾರ್ಥನೆ, ನಂತರ ಗುಬ್ಬಿ ಮಲ್ಲಣಾರ್ಯ ವಿರಚಿತ ವೀರಶೈವಾಮೃತ ಪುರಾಣದ ಪ್ರವಚನ ನಡೆಯಲಿದ್ದು, ಡಾ.ಕೆ.ಅನಂತರಾಮು ಮತ್ತು ಡಾ.ಬಿ.ವಿ.ವಸಂತಕುಮಾರ್ ವ್ಯಾಖ್ಯಾನ ನಡೆಸಲಿದ್ದು, ಕೃ.ರಾಮಚಂದ್ರ ಅವರು ವಾಚನ ಮಾಡಲಿದ್ದಾರೆ.

ಪ್ರತಿನಿತ್ಯ ಬಂದು ಹೋಗಲು ಜೆ.ಪಿ.ನಗರ, ಜೆಎಸ್ಎಸ್ ಬಡಾವಣೆ ಮತ್ತು ಜೆಎಸ್ಎಸ್ ವಿದ್ಯಾಪೀಠದ ಬಳಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: