ಸುದ್ದಿ ಸಂಕ್ಷಿಪ್ತ

ಪಾಲಿಕೆ ಚುನಾವಣೆ : ಜೆಡಿಎಸ್ ಅರ್ಜಿ ವಿತರಣೆ ನಾಳೆ

ಮೈಸೂರು,ಆ.10 :  ಆ.31ರಂದು ನಡೆಯುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲು ಆಸಕ್ತಿ ಇರುವ ಆಕಾಂಕ್ಷಿಗಳು ಕಚೇರಿಯಲ್ಲಿ ಅರ್ಜಿ ಫಾರಂ ಪಡೆಯಬಹುದಾಗಿದೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ರಾಜಶೇಖರ ಮೂರ್ತಿ ತಿಳಿಸಿದ್ದಾರೆ.

ಸರ್ಕಾರದಿಂದ ಅಧಿಸೂಚನೆ ಪ್ರಕಟವಾದ ಹಿನ್ನಲೆಯಲ್ಲಿ  ನಾಳೆ ದಿ.11 ರಂದು ಬೆಳಗ್ಗೆ 10.30 ರಿಂದ ಅರ್ಜಿ ಫಾರಂ ಅನ್ನು ವಿತರಿಸಲಿದ್ದು, ನಿಗದಿತ ಶುಲ್ಕ ಭರಿಸಿ ಪಡೆದು, ಭರ್ತಿ ಮಾಡಿ ನಂತರ ಕಚೇರಿಯಲ್ಲಿಯೇ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: