ಮೈಸೂರು

ಪೌರ ಕಾರ್ಮಿಕರ ಆರೋಗ್ಯದತ್ತ ಗಮನ ಹರಿಸಿದ ಸುನಿಲ್ : ಇತರ ಸದಸ್ಯರಿಗೆ ಮಾದರಿ

sunil-2ಪೌರ ಕಾರ್ಮಿಕರು. ಬೆಳಿಗ್ಗೆ ಬರ್ತಾರೆ. ರಸ್ತೆಗಳನ್ನೆಲ್ಲ ಸ್ವಚ್ಛಗೊಳಿಸಿ ಹೋಗುತ್ತಾರೆ. ಮನೆಗಳಲ್ಲಿ ಸಂಗ್ರಹಿಸಿಟ್ಟ ಕಸಗಳನ್ನು ಕೊಂಡೊಯ್ಯುತ್ತಾರೆ. ಅವಷ್ಟೇ ನಮಗೆ ಗೊತ್ತಿರೋದು. ಅದರಲ್ಲೂ ಅವರು ಆರೋಗ್ಯವಾಗಿದ್ದಾರಾ? ಅವರಿಗೆ ಏನಾಗಿದೆ ಏನೂ ಗೊತ್ತಿರಲ್ಲ. ಅವರಿಗೆ ಪಾಲಿಕೆ ವತಿಯಿಂದ ಅವರು ಮಾಡಿರೋ ಕೆಲಸಗಳಿಗೆ ವೇತನ ಸಿಗತ್ತೆ. ಅವರ ಆರೋಗ್ಯದ ಬಗ್ಗೆ ನಾವೇನು ಮಾಡಕಾಗತ್ತೆ ಅನ್ನೋರಿಗೆ ಇಲ್ಲಿದ್ದಾರೆ ಒಬ್ಬರು ಮಾದರಿ ವ್ಯಕ್ತಿ.  ಇವರು ಇದೀಗ ಸದ್ದಿಲ್ಲದೇ ಪೌರಕಾರ್ಮಿಕರ ಆರೋಗ್ಯದ ಕುರಿತು ಕಾಳಜಿ ವಹಿಸುತ್ತಿದ್ದಾರೆ. ಈ ರೀತಿ ಮಾಡುತ್ತಿರೋರು ಬೇರಾರು ಅಲ್ಲ. ಮೈಸೂರು ಮಹಾನಗರ ಪಾಲಿಕೆಯ ಚುನಾಯಿತ ಪ್ರತಿನಿಧಿ ಸುನೀಲ್.

ವಾರ್ಡ್ ನಂಬರ್ 10ರ ಕಾಂಗ್ರೆಸ್ ಸದಸ್ಯರಾದ ಇವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಜನುಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಸಾಲಿಗೆ ಇದೀಗ ಮತ್ತೊಂದು ಕೆಲಸ ಸೇರ್ಪಡೆಯಾಗಿದೆ. ಅದೇ ಪೌರ ಕಾರ್ಮಿಕರ ಆರೋಗ್ಯದ ಕುರಿತಾಗಿನ ಕಾಳಜಿ. ನಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿಡಲು ಹಗಲು ರಾತ್ರಿ ಶ್ರಮ ವಹಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸೋದನ್ನೇ ಮರೆತುಬಿಡುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಉದ್ದೇಶದಿಂದ ಪೌರ ಕಾರ್ಮಿಕರ ಕುರಿತು ಕಾಳಜಿಯೊಂದಿಗೆ ಅವರ ಆರೋಗ್ಯದ ಕಡೆಯೂ ಗಮನ ಹರಿಸುತ್ತಿದ್ದಾರೆ.

ತಮ್ಮ ಕ್ಷೇತ್ರದ ಪೌರ ಕಾರ್ಮಿಕರಿಗೆ ಸುನೀಲ್ ಅವರು ವಾರಕೊಮ್ಮೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳ್ಳಂ ಬೆಳಗ್ಗೆ ವ್ಯಕ್ತಿತ್ವ ವಿಕಸನ ಅಧಿಕಾರಿ ಹಾಗೂ ಯೋಗ ಗುರುಗಳಿಂದ ಆರೋಗ್ಯದ ಕುರಿತು ಕಾಳಜಿ ವಹಿಸುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಮಾತ್ರವಲ್ಲ ಅವರು ಆರೋಗ್ಯವಿದ್ದರೆ ನಾವು ಆರೋಗ್ಯವಾಗಿರ್ತೇವೆ ಅಂತಾರೆ ಸುನೀಲ್.

ಯೋಗ ಸಕಲ ರೋಗಗಳಿಗೂ ಮದ್ದು ಎಂಬ ಮಾತೊಂದಿದೆ. ಅದರಂತೆ ಸುನೀಲ್ ಅವರು ಮಂಜು ಎಂಬ ಯೋಗ ಗುರುಗಳನ್ನು ಕರೆಯಿಸಿ ಅವರಿಂದ ಪೌರಕಾರ್ಮಿಕರಿಗೆ ಮಾಹಿತಿ ಕೊಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮದ್ಯಪಾನ, ಧೂಮಪಾನ ತ್ಯಜಿಸುವ ಹಾಗೂ ಶುದ್ಧ ಆಹಾರ ಸೇವನೆ ಮಾಡುವ, ನಿತ್ಯ ಶುಚಿಯಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಜೊತೆಯಲ್ಲಿ ಮುಕುಂದ್ ಎನ್ನುವ ವ್ಯಕ್ತಿತ್ವ ವಿಕಸನ ಅಧಿಕಾರಿಯ ಸಮ್ಮುಖದಲ್ಲಿ ಇವರಿಗೆ ಭೋದನೆ ಕೂಡ ಮಾಡಿಸುತ್ತಿದ್ದಾರೆ.

ಸುನೀಲ್ ಕಾರ್ಯಕ್ಕೆ ಸ್ಥಳಿಯರ ಶ್ಲಾಘನೆ

ಸುನೀಲ್ ಅವರ ಕಾರ್ಯಕ್ಕೆ  ಸ್ಥಳೀಯರು ಭೇಷ್ ಅಂದಿದ್ದಾರೆ. ಕಾರಣ ಕೇವಲ ನಮ್ಮ ವಾರ್ಡ್ ಮಾತ್ರವಲ್ಲ. ಅಕ್ಕ-ಪಕ್ಕದ ವಾರ್ಡ್ ಗಳ ಜನಗಳ ಸಮಸ್ಯೆಗೂ ಸ್ಪಂದಿಸುತ್ತಾರೆ. ಇತ್ತೀಚೆಗೆ ಟಿ.ಕೆ.ಲೇಔಟ್ ನ ಕಿರಣ್ ಹಾಗೂ ಸೋಮೆಗೌಡ ಎಂಬುವವರಿಗೆ ಕೃತಕ ಕಾಲು ಹಾಕಿಸಿ ಮಾನವೀಯತೆ ಮೆರೆದಿದ್ದಾರೆ. ಇವರು ಇತರೆ ಸದಸ್ಯರಿಗಿಂತ ವಿಭಿನ್ನ ಎನ್ನುತ್ತಾರೆ ಮಹೇಶ್.

ಒಟ್ಟಾರೆ, ಪಾಲಿಕೆ ಸದಸ್ಯರಾದ ಮೇಲೆ ತಮ್ಮ ಕ್ಷೇತ್ರದ ಜನರನ್ನು ಮರೆಯುವ ಕೆಲ ಸದಸ್ಯರ ನಡುವೆ ವಿಭಿನ್ನವಾದ ಕೆಲಸ ಕಾರ್ಯ ಮಾಡುತ್ತ, ಗಮನ ಸೆಳೆದಿದ್ದಾರೆ ಸುನೀಲ್. ಅವರ ಸಾರ್ವಜನಿಕ ಸೇವೆ ನಿಜಕ್ಕೂ ಶ್ಲಾಘನೀಯ.

ಸುರೇಶ್.ಎನ್.

Leave a Reply

comments

Related Articles

error: