ಕರ್ನಾಟಕಮೈಸೂರು

ಸೌರಶಕ್ತಿ, ವಾಯುಶಕ್ತಿಯ ಬಳಕೆ ಜಾಗೃತವಾಗಲಿ: ನಾಗೇಶ್ ಹೆಗಡೆ ಅಭಿಮತ

ತಾಂತ್ರಿಕತೆ ಬದಲಾಗುವ ಅವಶ್ಯಕತೆಯಿದ್ದು ಖನಿಜ ತೈಲದಿಂದ ಪ್ರಕೃತಿಗೆ ಹಾನಿಯುಂಟಾಗಿದೆ. ಆದ್ದರಿಂದ, ಸೌರ ಹಾಗೂ ವಾಯುಶಕ್ತಿ ಬಳಕೆಯ ಅರಿವು ಜಾಗೃತವಾಗಲಿ. ಕರ್ನಾಟಕದಲ್ಲಿರುವ ನಾವು ಪುಣ್ಯವಂತರು. ಪ್ರಳಯದಿಂದ ದೂರವಿದ್ದೇವೆ ಎಂದು ಹಿರಿಯ ಪತ್ರಕರ್ತ ಹಾಗೂ ವಿಜ್ಞಾನ ಮತ್ತು ಪರಿಸರ ಬರಹಗಾರ ನಾಗೇಶ್ ಹೆಗಡೆ ಹೇಳಿದರು.

ಅವರು ಸೋಮವಾರ ಮೈಸೂರು ವಿವಿಯ ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆಯಿಂದ ಆಯೋಜಿಸಿದ್ದ ಪರಿಸರ ಮನನ ಕಾರ್ಯಾಗಾರದಲ್ಲಿ ಮಾತನಾಡಿ, ಪರಿಸರದ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ 35- 40 ವರ್ಷಗಳಲ್ಲಿ ರಾಜಸ್ಥಾನದ ನಂತರ ಉತ್ತರ ಕರ್ನಾಟಕದ ಬಿಜಾಪುರ, ಗುಲ್ಬರ್ಗ, ರಾಯಚೂರು ಹಾಗೂ ಚಿತ್ರದುರ್ಗ ಜಿಲ್ಲೆಗಳು ಎರಡನೇ ಬೃಹತ್ ಮರುಳಗಾಡಾಗಿ ಮಾರ್ಪಡಾಗಲಿವೆ. 2017ರ ಬೇಸಿಗೆಯೂ ಭಯಾನಕವಾಗಿದ್ದು ಎದುರಿಸಲು ತಯಾರಾಗಿರಿ. ಅಂತರಜಲವೂ 800 ರಿಂದ 1000 ಅಡಿಗಳಷ್ಟು ಕುಸಿದಿದ್ದು, ಅಲ್ಲಿ ದೊರೆಯುವ ವಿಷಕಾರಿ ರಸಾಯನಿಕ ನೀರು ಕುಡಿಯಲೂ ಯೋಗ್ಯವಿಲ್ಲ. ನೀಲಗಿರಿ ಮರಗಳಿಂದ ಪರಿಸರಕ್ಕೆ ಧಕ್ಕೆಯಾಗಿದೆ. ಕೆರೆಗಳ ನೀರು ಪಾಚಿಕಟ್ಟಿವೆ. ಇದರಿಂದ ಪಾತಾಳದ ಮರುಭೂಮಿ ಹಾಗೂ ಹಸಿರು ಮರುಭೂಮಿಯನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಕಳೆದ ವರ್ಷ ಡಿಸೆಂಬರ್‍ ನಲ್ಲಿ ಚೆನ್ನೈಗೆ ದಾಳಿಯಿಟ್ಟ ಜಾಗತಿಕ ಮಳೆಯಿಂದಾಗಿ ಇಡೀ ನಗರವೇ ಹದಿನೈದು ದಿನಗಳ ಕಾಲ ಖಂಡವಾಗಿ ಮಾರ್ಪಟಿತ್ತು.

ಜಗತ್ತಿನ ಶೇ.65ರಷ್ಟು ಪ್ರದೇಶದಲ್ಲಿ ನೀರು ಆವರಿಸಿಕೊಂಡಿದೆ. ಹಿಮಾಲಯವು ಕರಗುತ್ತಿದ್ದು ಮುಂದಿನ 10-15 ವರ್ಷಗಳಲ್ಲಿ ಹಿಮನದಿಗಳ ಪ್ರವಾಹವುಂಟಾಗಿ ಬಾಂಗ್ಲಾದೇಶವನ್ನು ನಾಶಪಡಿಸುವುದು. ದೇಶದ ಕರಾವಳಿಗಳಿಗೂ ಆತಂಕ ತಪ್ಪಿದ್ದಲ್ಲ. ಪರಿಸರ ಜಾಗೃತಿಗಾಗಿ ಪ್ಲಾಸ್ಟಿಕ್ ಹಾಗೂ ಪೆಟ್ರೋಲಿಯಂ ಮುಕ್ತರಾಗಬೇಕು. ಪೆಟ್ರೋಲಿಯಂನಿಂದ ಗಾಳಿಯಲ್ಲಿ ಕಾರ್ಬನ್ ಡೈ ಅಕ್ಸೈಡ್ ಹಾಗೂ ಮೋನೋಕ್ಸೈಡ್ ಹೆಚ್ಚಿದ್ದು ಸೈಕಲ್ ಬಳಕೆ ಹೆಚ್ಚಾಗಬೇಕು. ಯೂರೋಪ್ ರಾಷ್ಟ್ರಗಳ ಅಧ್ಯಕ್ಷರೇ ಸೈಕಲ್‍ಗಳನ್ನು ಬಳಸುತ್ತಿದ್ದಾರೆ. ನಾವು ಅವರಿಂದ ಪ್ರೇರೇಪಣೆಯನ್ನು ಪಡೆಯಬೇಕು ಎಂದರು.

ಖನಿಜ ತೈಲ ಉಪಯೋಗವನ್ನು ಕಡಿತಗೊಳಿಸಿ, ಮುಂದಿನ ಜನಾಂಗಕ್ಕೆ ತಾಂತ್ರಿಕತೆ ಬದಲಾಗಬೇಕು. ಸೌರಶಕ್ತಿ ಹಾಗೂ ವಾಯು ಶಕ್ತಿಯ ವಿದ್ಯುತ್ ಬಳಸುವುದರಿಂದ ಪ್ರಕೃತಿಯನ್ನು ರಕ್ಷಿಸಬಹುದು. ಈ ನಿಟ್ಟಿನಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಹೊಸ ಭವಿಷ್ಯದ ಪೀಳಿಗೆಯನ್ನು ರೂಪಿಸಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಪ್ರಕೃತಿ ವಿಪತ್ತಿನ ಅನಾಹುತದಿಂದಾಗುವ ದುಷ್ಪರಿಣಾಮಗಳ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Leave a Reply

comments

Related Articles

error: