ಮೈಸೂರು

ಕೆ.ಆರ್.ನರ್ಸಿಂಗ್ ಆಸ್ಪತ್ರೆಯ ಹಾಸ್ಟೇಲ್ ಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಸೈಕೋ ಬಂಧನ

ಮೈಸೂರು,ಆ.11:- ಕೆ.ಆರ್.ನರ್ಸಿಂಗ್ ಆಸ್ಪತ್ರೆಯ ಹಾಸ್ಟೇಲ್ ಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಸೈಕೋ ನನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಕೇರಳದ ಕೊಟ್ಟಾಯಂ ಜಿಲ್ಲೆಯ ಪುದುಪಳ್ಳಿ ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ಮಹಮ್ಮದ್ ಅಲ್ತಾಫ್(23) ಎಂದು ಗುರುತಿಸಲಾಗಿದೆ. ಈತ ಜು.20ರ ತಡರಾತ್ರಿ ಅಕ್ರಮವಾಗಿ ಹಾಸ್ಟೇಲ್ ಗೆ ನುಗ್ಗಿ ಸೆಕ್ಯೂರಿಟಿ ಗಾರ್ಡ್ ಗೆ ಚಾಕೂ ತೋರಿಸಿ ವಿದ್ಯಾರ್ಥಿನಿಯರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ. ಈತ  ಹಾಸ್ಟೇಲ್ ಗೆ ನುಗ್ಗಿ ವಿದ್ಯಾರ್ಥಿನಿಯರ ಒಳಉಡುಪು ಕದಿಯುತ್ತಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು, ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರನ್ನು ಬೆದರಿಸಿ ಮೊಬೈಲ್ ಕಿತ್ತುಕೊಳ್ಳುತ್ತಿದ್ದ ಎನ್ನಲಾಗಿದೆ.  ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆರೋಪಿ ಕೇರಳದಲ್ಲಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ತೆರಳಿದ ಪೊಲೀಸರು ಕೊಟ್ಟಾಯಂ ಜಿಲ್ಲೆಯ ಪುದುವಳ್ಳಿಯಲ್ಲಿ ಜಿನುಲಾಲ್ ವಿಸಿ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಮಹಮ್ಮದ್ ಅಲ್ತಾಫ್ ನನ್ನು ಬಂಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: