ಮೈಸೂರು

ಮುಂದುವರಿದ ಕಳ್ಳತನ ಕೃತ್ಯ : ಗೆಳೆಯರಿಂದಲೇ ಕಳ್ಳತನ

ಮೈಸೂರು,ಆ.11:- ನಗರದಲ್ಲಿ ದಿನವೂ ಬಿಡದೇ ಕಳ್ಳತನಗಳು ನಡೆಯುತ್ತಲೇ ಇದೆ. ವಿದ್ಯಾರಣ್ಯಪುರಂನ ಮನೆಯೊಂದರಲ್ಲಿ ಹಾಡಹಗಲೇ ಕಳ್ಳತನವಾಗಿದ್ದರೆ, ಕುವೆಂಪುನಗರದ ಮನೆಯೊಂದರಲ್ಲಿ ಗೆಳೆಯರೇ ಕಳ್ಳತನ ನಡೆಸಿದ್ದಾರೆ.

ಮಹದೇವಪುರ #141, 08 ನೇ ಕ್ರಾಸ್ ನಿವಾಸಿ ಚೇತನ್, ಎಂಬವರು ಜು.9 ರಂದು ಬೆಳಿಗ್ಗೆ 10 ಗಂಟೆಗೆ ಮನೆಯ ಮುಂಬಾಗಿಲಿನ ಡೋರ್ ಲಾಕ್ ಹಾಕಿಕೊಂಡು ಹೋರ ಹೋಗಿದ್ದರು.  ಸುಮಾರು 11.23ರ ಸಮಯದಲ್ಲಿ ಅವರ  ಪಕ್ಕದ ಮನೆಯ ಮಂಜುಳ ಎಂಬವರು ಕರೆ ಮಾಡಿ ನಿಮ್ಮ ಮನೆಯಿಂದ ಕಾಂಪೌಂಡ್ ಹಾರಿ ಯಾರೋ ಓಡಿ ಹೋದರು. ಮನೆ ಬಾಗಿಲು ತೆರೆದಿದೆ ಎಂದು ತಿಳಿಸಿದ್ದಾರೆ. ತಕ್ಷಣ ಬಂದು ಮನೆಯ ಒಳಗಡೆ ಹೋಗಿ ನೋಡಲಾಗಿ, ಬೀರುಗಳು ತೆರೆದಿದ್ದು, ಬೀರುವಿನಲ್ಲಿದ್ದ ಎಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪರಿಶೀಲಿಸಿದಾಗ 15ಗ್ರಾಂ ತೂಕದ ಒಂದು ಚಿನ್ನದ ಉಂಗುರ, 20ಗ್ರಾಂ ತೂಕದ ಒಂದು ಚೈನ್, 3 ½ ಗ್ರಾಂ ತೂಕದ ಮಗುವಿನ  3ಉಂಗುರಗಳು, 10ಗ್ರಾಂ ತೂಕದ ಒಂದು ಜೊತೆ ಓಲೆ ಜುಮುಕಿ 10,000ರೂ.ನಗದು, ಒಟ್ಟು 48.5ಗ್ರಾಂ ತೂಕದ ಒಡವೆ ಹಾಗೂ ನಗದು ಕಳ್ಳತನವಾಗಿದೆ ಎಂದು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕುವೆಂಪುನಗರದ ಚಂದ್ರಿಕಾ ಅವರ ಮನೆಯಲ್ಲಿ ಅವರ ಸ್ನೇಹಿತರೇ ಕಳ್ಳತನ ಮಾಡಿದ್ದಾರೆ. ಅವರ ಸ್ನೇಹಿತೆ ಮೀನಾ ಮತ್ತು ಭರತ್ ಎಂಬವರು ಬೆಳಗಾವಿಯಿಂದ ಮನೆಗೆ ಬಂದಿದ್ದಾಗ ಮನೆಯಲ್ಲಿಟ್ಟಿದ್ದ 100ಗ್ರಾಂ ತೂಕದ 2ಎಳೆ ಮಾಂಗಲ್ಯ ಸರ,1 ಎಳೆಯ ಚಿನ್ನದ ಸರ, 50,000.ರೂ.ನಗದನ್ನು ಮನೆಯಿಂದ ಹೊರ ಹೋಗಿದ್ದಾಗ ಮೀನಾ ಮತ್ತು ಭರತ್ ಕಳುವು ಮಾಡಿದ್ದಾರೆ ಎಂದು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: