ಪ್ರಮುಖ ಸುದ್ದಿ

ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಸಾವು

ರಾಜ್ಯ(ಬೆಳಗಾವಿ)ಆ.11:- ಖಾನಾಪುರ ತಾಲೂಕಿನ ಬೀಡಿ ಸಮೀಪದ ಕಸಮಳಗಿ ಗ್ರಾಮದ ಯೋಧ ಮೌಲಾಲಿ ಪಾಟೀಲ (40) ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆಂದು ಪುಣೆಯ ಮಿಲಿಟರಿ ಹಾಸ್ಪಿಟಲ್ ಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತರು ಕಳೆದ 21ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷದಿಂದ ಪಶ್ಚಿಮ ಬಂಗಾಳದ ಪಾನಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ‌ಓರ್ವ ಪುತ್ರ, ತಂದೆ, ತಾಯಿ‌ ಮತ್ತು ಮೂವರು ರರನ್ನು ಅಗಲಿದ್ದಾರೆ. ಇಂದು ಬೆಳಗಿನ ಜಾವ ಮೃತರ ಪಾರ್ಥಿವ ಶರೀರ ಸ್ವಗ್ರಾಮವಾದ ಕಸಮಳಗಿಗೆ ಆಗಮಿಸಿದ್ದು, ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ಲಭಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: