ಮೈಸೂರು

ಆ.14 ರಂದು ಶ್ರೀವೀರಭದ್ರಸ್ವಾಮಿ ಜನ್ಮೋತ್ಸವ : ರಥೋತ್ಸವ

ಮೈಸೂರು,ಆ.11 : ಕೆ.ಆರ್.ಮೊಹಲ್ಲಾದ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಪೂಜಾ ಕೈಂಕರ್ಯಗಳು ಜನ್ಮದಿನೋತ್ಸವ ಹಾಗೂ ರಥೋತ್ಸವವನ್ನು ಏರ್ಪಡಿಸಲಾಗಿದೆ.

ಆ.11 ರಿಂದ ಸೆ.9ರವರೆಗೆ ನಡೆಯುವ ಪೂಜೆಗಳಲ್ಲಿ ಇಂದು ಭೀಮನ ಅಮಾವಾಸ್ಯೆ ಪ್ರಯಕ್ತ  ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಮ್ಮನವರಿಗೆ ತೈಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಮಾಡಲಾಯಿತು.

ಆ.14ರಂದು ಬೆಳಗ್ಗೆ 10 ಕ್ಕೆ ಜನ್ಮದಿನೋತ್ಸವ ಹಾಗೂ ರಥೋತ್ಸವ ನಡೆಯಲಿದ್ದು ಅಂದು ಪ್ರಾತಃ ಕಾಲದ ಬೆಳಗ್ಗೆ 6 ಗಂಟೆಯಿ ಪುಣ್ಯಾಹಂ ಹೋಮ, ರಥಕ್ಕೆ ಬಲಿಪೂಜೆ, ಗಂಗಾಪೂಜೆ, ವೀರಭದ್ರೇಶ್ವರ ಹಾಗೂ ಭದ್ರಕಾಳಮ್ಮನವರಿಗೆ ತೈಲಾಭಿಷೇಕ, ಗಣಪತಿ ಹೋಮ ನಡೆಯುವುದು.

ಕೆ.ಆರ್.ನಗರದ ಗಾವಡಗೆರೆ ಗುರುಲಿಂಗ ಜಂಗಮ ದೇವರಮಠದ ಶ್ರೀನಟರಾಜ ಸ್ವಾಮೀಜಿ ಉದ್ಘಾಟಿಸುವರು. ಶಾಸಕ ಎಸ್.ಎ.ರಾಮದಾಸ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಮತ್ತಿತರರು ಇರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: