ಸುದ್ದಿ ಸಂಕ್ಷಿಪ್ತ

ಅಂತರ ಪ್ರೌಢಶಾಲಾ ಪ್ರಬಂಧ ಸ್ಪರ್ಧೆಯ ಸಮಾರೋಪ .13.

ಮೈಸೂರು,ಆ.11 : ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ವಿಜಯನಗರದ 2ನೇ ಹಂತದ ಜೆಎಸ್ಎಸ್ ಪ್ರೌಢಶಾಲೆ ಸಂಯುಕ್ತವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಂತರರಾಷ್ಟ್ರಿಯ ಯುವ ದಿನಾಚರಣೆ ಅಂಗವಾಗಿ ‘ಅಂತರ ಪ್ರೌಢಶಾಲಾ ಪ್ರಬಂಧ ಸ್ಪರ್ಧೆಯ’ ಸಮಾರೋಪ ಸಮಾರಂಭವನ್ನು ಆ.13ರ ಮಧ್ಯಾಹ್ನ 3 ಗಂಟೆಗೆ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ.

ಮುಖ್ಯೋಪಾಧ್ಯಕ್ಷ ವಿ.ನಾಗೇಶ್, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಲಲಿತ ಕಲಾ ಕಾಲೇಜು ಪ್ರಾಂಶುಪಾಲ ರಾಮಸ್ವಾಮಿ ಇರುವರು. ಬಿಜಿಎಸ್, ಬಿ.ಇಡಿ ಕಾಲೇಜು ಪ್ರಾಂಶುಪಾಲ ಡಾ.ನಾಗರಾಜು ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: