ದೇಶ

ವ್ಯಾಪಾರಿಗಳು ಡಿಜಿಟಲ್ ವ್ಯವಸ್ಥೆಯ ಮೂಲಕ ವ್ಯವಹಾರ ನಡೆಸಿದರೆ ಶೇ.2ರಷ್ಟು ತೆರಿಗೆ ರಿಯಾಯಿತಿ: ಜೇಟ್ಲಿ

ಸಣ್ಣ ವ್ಯಾಪಾರಿಗಳ ವಾರ್ಷಿಕ ವಹಿವಾಟು 2 ಕೋಟಿಯವರೆಗೆ ಇದ್ದರೆ ಅವರು ಶೇ.8ರಷ್ಟು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಮಾಡಿದರೆ ಶೇ.2ರಷ್ಟು ರಿಯಾಯಿತಿ ನೀಡಲಾಗುವುದು. ಶೇ.6ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.

ಮಂಗಳವಾರದಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆ ನೋಟು ಹೊಂದಿರುವವರು ಒಂದೇ ಬಾರಿ ಬ್ಯಾಂಕಿಗೆ ಹೋಗಿ ಠೇವಣಿ ಇಡಬೇಕು. ಪ್ರತಿದಿನ ಹೋಗುತ್ತಿದ್ದರೆ ಸಂಶಯ ಮೂಡುತ್ತದೆ ಎಂದು ತಿಳಿಸಿದರು.

ಆರ್‍ಬಿಐ ಬಳಿ ಸಾಕಷ್ಟು ಹಣವಿದೆ. ಡಿ.30ರ ನಂತರ ಚಲಾವಣೆ ಮಾಡಲು ಕೂಡ ಆರ್‍ಬಿಐ ಬಳಿ ಹಣವಿದೆ. ಯಾವುದೇ ಅಕ್ರಮಗಳು ನಡೆಯದಂತೆ ಬ್ಯಾಂಕುಗಳು ಸಿಬ್ಬಂದಿ ಮೇಲೆ ನಿಗಾ ಇರಿಸಿದೆ. ಈ ತಿಂಗಳ 30ರವರೆಗೆ ಹಳೆಯ 500 ಹಾಗೂ 1000 ರೂ. ನೋಟುಗಳಲ್ಲಿ ಬ್ಯಾಂಕ್‍ಗಳಲ್ಲಿ ವ್ಯವಹಾರ ನಡೆಸಬಹುದು. ನಂತರ ಎಲ್ಲ ವಹಿವಾಟುಗಳನ್ನು ನಿಲ್ಲಿಸಬಾರದು ಎಂದರು.

Leave a Reply

comments

Related Articles

error: