ಮೈಸೂರು

ನಂಜನಗೂಡಿನ ದೇವಸ್ಥಾನ ಮುಂಭಾಗದಲ್ಲಿನ 6 ಮನೆಗಳು ಜಲಾವೃತ

ಮೈಸೂರು,ಆ.11:- ಕೇರಳದ ವೈನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ನಂಜನಗೂಡಿನಲ್ಲಿ ಕಪಿಲಾ ನದಿಯಲ್ಲಿನ ನೀರಿನ ಮಟ್ಟ ಜಾಸ್ತಿ ಆಗಿದೆ. ಇದರಿಂದ  ದೇವಸ್ಥಾನ ಮುಂಭಾಗದಲ್ಲಿನ ಸುಮಾರು 6 ಮನೆಗಳು  ಜಲಾವೃತಗೊಂಡಿವೆ.

ಸ್ಥಳಕ್ಕೆ ಯಾವ ಅಧಿಕಾರಿಯೂ ಬಾರದೇ ಇರುವುದರಿಂದ ರಾತ್ರಿ ಇಡೀ ಮನೆ ಮನೆಯ ನಿವಾಸಿಗಳು ಮುಂಭಾಗ ಮಲಗುವ ಸ್ಥಿತಿ ಉಂಟಾಗಿತ್ತು ಎಂದು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಮೂಗಶೆಟ್ಟಿ ಅವರು ರಾತ್ರಿಯೇ ಯಾರಿಂದಲೋ ವಿಷಯ ತಿಳಿದು ಸ್ಥಳಕ್ಕೆ ಬಂದು ದೇವಸ್ಥಾನದ ಮುಂಭಾಗದಲ್ಲಿರುವ ಉಪ್ಪಾರ ಛತ್ರದಲ್ಲಿ ಊಟ ಉಪಚಾರ ನೀಡಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ನಿವಾಸಿ ರತ್ನಮ್ಮ ತಿಳಿಸಿದರು. ಅಧಿಕಾರಿಗಳು ಎಲ್ಲಾ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಗೋವಿಂದರಾಜು, ಗಣೇಶ್, ಮಹದೇವು, ರತ್ನಮ್ಮ, ಮಹದೇವಮ್ಮ ಮತ್ತಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: