ಕರ್ನಾಟಕಪ್ರಮುಖ ಸುದ್ದಿ

ಮುಖ್ಯಮಂತ್ರಿ ಕುಮಾರಸ್ವಾಮಿ ಭತ್ತದ ನಾಟಿ ಹಾಸ್ಯಸ್ಪದ: ಬಿಎಸ್‍ವೈ ಟೀಕೆ

ಬಳ್ಳಾರಿ (ಆ.11): ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭತ್ತದ ನಾಟಿ ಮಾಡಲು ಹೋಗುತ್ತಿರುವುದು ಹಾಸ್ಯಾಸ್ಪದ ಸಂಗತಿ, ಅದು ಒಂದು ರಾಜಕೀಯವಷ್ಟೇ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಹಂಚಿಕೆ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿಗಳು, ನಾನೇನು ದುಡ್ಡಿನ ಗಿಡ ನೆಟ್ಟಿಲ್ಲ ಎನ್ನುತ್ತಾರೆ. ಇದು ಅವರಿಗಿರುವ ಜನಪರ ಕಾಳಜಿ ಎಷ್ಟೆಂಬುದನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪರ ಬ್ಯಾಟಿಂಗ್ ಮಾಡಿದ ಯಡಿಯೂರಪ್ಪನವರು, ಮೋದಿಯವರು ದೇಶದ ಅಭಿವೃದ್ಧಿ ಕಾರ್ಯಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಅವರು ದೇಶವನ್ನು ವಿಕಾಸದ ಕಡೆಗೆ ಮುನ್ನಡೆಸುತ್ತಿದ್ದಾರೆ. ಮೋದಿಯವರ ಕಾರ್ಯವೈಖರಿಗೆ ಇಡೀ ಜಗತ್ತೇ ಬೆರಗಾಗಿದೆ ಎಂದು ಹೇಳಿದರು.(ಎನ್.ಬಿ)

Leave a Reply

comments

Related Articles

error: