ಮೈಸೂರು

ಎರಡು ಪ್ರತ್ಯೇಕ ಪ್ರಕರಣ : ಡಯಾಲಿಸಿಸ್ ಗೆ ಸಹಾಯ ಮಾಡಲು ಮನವಿ

ಆಸ್ಪತ್ರೆಯ ಖರ್ಚು ವೆಚ್ಚಗಳಿಗಾಗಿ ಸಹಾಯ ಮಾಡಿ ಎಂದು ಒಂದು ವರ್ಷದಿಂದ ಮೂತ್ರಪಿಂಡ ವೈಫಲ್ಯತೆಯಿಂದ ನರಳುತ್ತಿರುವ ಮಂಚೇಗೌಡನಕೊಪ್ಪಲು ಕಿಡಗಣ್ಣಮ್ಮ ಬಡಾವಣೆಯ ನಿವಾಸಿ ನಾಗರಾಜು ಸಹಾಯ ಯಾಚಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಾಜು ತನಗೆ 7 ವರ್ಷದ ಮಗಳಿದ್ದು, ಕಳೆದ ಒಂದು ವರ್ಷದಿಂದ ಎರಡು ಮೂತ್ರಪಿಂಡಗಳು ಸಂಪೂರ್ಣವಾಗಿ ವೈಫಲ್ಯವಾಗಿದೆ. ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ವಾರಕ್ಕೆ 2 ಬಾರಿ ಡಯಾಲಿಸಿಸ್ ಮಾಡಿಸಬೇಕಾಗಿದೆ. ಜೀವನ ಸಾಗಿಸಲು ಯಾವುದೇ ಕೆಲಸ ಮಾಡಲು ಅವರ ಆರೋಗ್ಯ ಮತ್ತು ದೇಹ ಸಹಕಾರ ನೀಡುತ್ತಿಲ್ಲ ಹಾಗೆಯೇ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಧನಸಹಾಯ ಮಾಡಲಿಚ್ಛಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದಾಗಿದೆ. ನಾಗರಾಜು ಬಿ. ಮೊ.ನಂ : 9945032904 / 8970693522

ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಖಾತೆ ನಂ : 256601000000275

ಐ.ಎಫ್.ಎಸ್.ಸಿ ಕೋಡ್ : IOBA 0002566 ಹೆಬ್ಬಾಳ್ ಶಾಖೆ, ಮೈಸೂರು

ಇದೇ ಸಂದರ್ಭ ಹೆಗ್ಗಡದೇವನಕೋಟೆ ತಾಲ್ಲೂಕಿನ ಹೊಸಕೋಟೆ ಗ್ರಾಮದ ನಿವಾಸಿ ನಂದೀಶ್ ಎಂಬುವವರ ತಾಯಿ ಕಳೆದ 3-4 ತಿಂಗಳಿನಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು, ಪ್ರತಿವಾರಕ್ಕೆ 4 ಬಾರಿ ಡಯಾಲಿಸಿಸ್ ಮಾಡಿಸಬೇಕಾಗಿದ್ದು, ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಖರ್ಚು- ವೆಚ್ಚಕ್ಕಾಗಿಯೂ ಧನ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡರು. ಧನ ಸಹಾಯ ಮಾಡಲಿಚ್ಛಿಸುವವರು ನಂದೀಶ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಖಾತೆ ಸಂಖ್ಯೆ : 64164728174 ಐ.ಎಫ್.ಎಸ್.ಸಿ ಕೋಡ್ : SBMY0040074

ಸರಗೂರು ಇಲ್ಲಿಗೆ ಜಮಾ ಮಾಡಬಹುದು ಎಂದು ತಿಳಿಸಿದರು.

Leave a Reply

comments

Related Articles

error: