ಮನರಂಜನೆ

ಎರಡು ವರ್ಷಗಳ ಕಾಲ ಸಲ್ಮಾನ್ ಸಹೋದರಿ ಜೊತೆ ಸಂಬಂಧವಿತ್ತು ಈ ನಟನಿಗೆ

ಬೆಂಗಳೂರು (ಆ.11): ಬಾಲಿವುಡ್ ನಟ ಅರ್ಜುನ್ ಕಪೂರ್ ಅವರಿಗೆ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಜೊತೆ ಎರಡು ವರ್ಷಗಳ ಕಾಲ ಸಂಬಂಧವಿತ್ತಂತೆ. ಈ ವಿಷಯ ಬಹುತೇಕರಿಗೆ ಇದುವರೆಗೂ ಯಾರಿಗೂ ತಿಳಿಯದೆ ಇರುವುದೇ ಆಶ್ಚರ್ಯವಾಗಿದೆ ಎಂದು ಬಿ-ಟೌನ್‍ ಮಂದಿ ಮಾತಾಡುತ್ತಿದ್ದಾರೆ.

ಇಬ್ಬರೂ ಎರಡು ವರ್ಷಗಳ ಕಾಲ ಸಂಬಂಧದಲ್ಲಿದ್ರು. ಅರ್ಪಿತಾ ಪ್ರೀತಿ ವಿಚಾರದಲ್ಲಿ ಅರ್ಜುನ್ ಗಂಭೀರವಾಗಿದ್ದ. ಅರ್ಜುನ್ ಕಪೂರ್ 18 ವರ್ಷದಲ್ಲಿರುವಾಗ್ಲೇ ಅರ್ಪಿತಾ ಪ್ರೀತಿಗೆ ಬಿದ್ದಿದ್ದ. ಆಗ ಅರ್ಜುನ್ ತೂಕ 140 ಕೆ.ಜಿ. ಯಿತ್ತು. ಸಲಾಂ-ಎ-ಇಷ್ಕ್ ಚಿತ್ರದ ನಿರ್ದೇಶಕರಿಗೆ ಅಸಿಸ್ಟೆಂಟ್ ಆಗಿ ಅರ್ಜುನ್ ಕೆಲಸ ಮಾಡ್ತಿದ್ದ. ಅರ್ಪಿತಾ ಪ್ರೀತಿ ವಿಚಾರವನ್ನು ಸಲ್ಮಾನ್ ಕುಟುಂಬಕ್ಕೆ ಹೇಳಿದಾಗ ಅವ್ರ ಪ್ರತಿಕ್ರಿಯೆ ಅಷ್ಟು ಚೆನ್ನಾಗಿರಲಿಲ್ಲವಂತೆ. ಅರ್ಪಿತಾ ತನ್ನ ಮೊದಲ ಪ್ರೀತಿ ಎಂಬುದನ್ನು ಅರ್ಜುನ್ ಒಪ್ಪಿಕೊಂಡಿದ್ದಾನೆ.

ತಮ್ಮ ಪ್ರೀತಿಯ ವಿಚಾರವನ್ನು ಸಲ್ಮಾನ್ ಕುಟುಂಬದ ಮುಂದೆ ಹೇಳಲು ಅರ್ಜುನ್ ಹೆದರಿದ್ದನಂತೆ. ಧೈರ್ಯ ಮಾಡಿ ಈ ವಿಷ್ಯ ತಿಳಿಸಿಯೂ ಆಗಿತ್ತಂತೆ. ಆದ್ರೆ ಸಲ್ಮಾನ್ ಕುಟುಂಬದವರು ಕಣ್ಣು ಕೆಂಪು ಮಾಡಿದ್ದರಂತೆ. ಈ ಮಧ್ಯೆ ಅರ್ಪಿತಾ, ಅರ್ಜುನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಳಂತೆ. ಅರ್ಜುನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಅರ್ಪಿತಾ, ಆಯುಶ್ ಶರ್ಮಾ ಕೈ ಹಿಡಿದಿದ್ದಾಳೆ. ಇಂತಿಪ್ಪ ಅವರ ಸಂಬಂಧದ ವೃತ್ತಾಂತ ಈಗ ಬೆಳಕಿಗೆ ಬಂದಿದೆ.

ಅಂದಹಾಗೆ ಈಗ ಅರ್ಪಿತಾ ಕೈಹಿಡಿದಿರುವ ಆಯುಶ್, ಶೀಘ್ರವೇ “ಲವ್ ರಾತ್ರಿ” ಚಿತ್ರದ ಮೂಲಕ ಬಾಲಿವುಡ್‍ ತೆರೆಗೆ ಬರಲು ಸಿದ್ಧರಾಗಿದ್ದಾರೆ.(ಎನ್.ಬಿ)

Leave a Reply

comments

Related Articles

error: