ಸುದ್ದಿ ಸಂಕ್ಷಿಪ್ತ
ಸ್ವಾತಂತ್ರ್ಯೋತ್ಸವ : ಉಪನ್ಯಾಸ ನಾಳೆ
ಮೈಸೂರು,ಆ.11 : ಸುನ್ನಿ ವಿದ್ಯಾರ್ಥಿ ಸಂಘದ ವತಿಯಿಂದ 72ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಸಮ್ಮೇಳನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ನಾಳೆ(12)ರ ಸಂಜೆ 4 ಗಂಟೆಗೆ ಟೌನ್ ಹಾಲ್ ನಲ್ಲಿ ಆಯೋಜಿಸಲಾಗಿದೆ.
ಭಾರತ ಪ್ರಜಾಪ್ರಭುತ್ವದ ವಿರುದ್ಧ ದೌರ್ಜನ್ಯ ವಿಷಯವಾಗಿ ನಡೆಯುವ ಉಪನ್ಯಾಸ ಕಾರ್ಯಕ್ರಮವನ್ನು ಸಹಾಯಕ ಪೊಲೀಸ್ ಕಮಿಷನರ್ ಮಾಥ್ಯು ಥಾಮಸ್ ಉದ್ಘಾಟಿಸುವರು, ಮೈವಿವಿಯ ರಾಜ್ಯಶಾಸ್ತ್ರ ವಿಭಾಗದ ಡಾ.ರಾಮಚಂದ್ರನ್ ಅವರು ಉಪನ್ಯಾಸ ನೀಡುವರು ಹಲವರು ಗಣ್ಯರು ಹಾಜರಿರುವರು. (ಕೆ.ಎಂ.ಆರ್)