ಮೈಸೂರು

ಡಿ.23 : ಅಂತಾರಾಷ್ಟ್ರೀಯ ಸ್ಪರ್ಧೆ

ಅಮೃತ ವಿಶ್ವವಿದ್ಯಾನಿಲಯವು ಡಿ.23 ರಂದು ACM ICPC-2016 ಅಂತಾರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಂಸ್ಥೆಯ ಫ್ಯಾಕಲ್ಟಿ ಅಸೋಸಿಯೇಟ್ ಗಣೇಶ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣೇಶ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಯಾವುದೇ ವಿವಿಯಲ್ಲಿ ಪದವಿಯನ್ನು ಅಭ‍್ಯಾಸ ಮಾಡುತ್ತಿರಬೇಕು. C,C++, Java, Pythan any programming language ನಲ್ಲಿ ಅನುಭವವಿರಬೇಕು.  ಈ ಸ್ಪರ್ಧೆಯಲ್ಲಿ ಒಟ್ಟು 4 ಸುತ್ತುಗಳಿವೆ. ಆನ್ ಲೈನ್ ಸುತ್ತು, ಆನ್ ಸೈಟ್ ಸುತ್ತು, ಆಲ್ ಇಂಡಿಯಾ ರೌಂಡ್ ಸುತ್ತು, ವರ್ಲ್ಡ್ ಫೈನಲ್ ಸುತ್ತು. ಒಂದು ತಂಡದಲ್ಲಿ ಮೂರು ಅಭ್ಯರ್ಥಿಗಳು ಇರಬಹುದು.

ಈ ಸ್ಪರ್ಧೆಯಲ್ಲಿ ಗೆದ್ದ ಸ್ಪರ್ಧಾಳುಗಳನ್ನು IBM, Facebook, Amazon, Direct I ಕಂಪನಿಗಳು ನೇಮಕಾತಿ ಮಾಡಿಕೊಳ್ಳುತ್ತವೆ  ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುದರ್ಶನ್, ಶೃತಿ ಹಾಜರಿದ್ದರು.

 

 

Leave a Reply

comments

Related Articles

error: