ಮೈಸೂರು

ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ಮೈಸೂರು,ಆ.12:- ಸ್ವಾತಂತ್ರ್ಯೋತ್ಸವದ ಅಂಗವಾಗಿ ಯು.ಜಿ.ಮೋಹನ್ ಕುಮಾರ್ ಅರಾಧ್ಯ ರಚಿಸಿರುವ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲಾ ಪ್ರದರ್ಶನ  ಕಲಾಮಂದಿರದ  ಸುಚಿತ್ರ ಕಲಾ ಗ್ಯಾಲರಿ ಯಲ್ಲಿ  ನಡೆಯಿತು.

ಇಂದು ನಡೆದ ಉದ್ಘಾಟನಾ ಕಾರ್ಯಕ್ರಮವನ್ನು  ಗಾಂಧಿ ಅಧ್ಯಯನ ಕೇಂದ್ರ ಮಾನಸ ಗಂಗೋತ್ರಿಯ ನಿರ್ದೇಶಕ  ಡಾ.ಎಂ‌.ಎಸ್ ‌ಶೇಖರ್ ನೆರವೇರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ  ಡಾ.ವೈ.ಡಿ.ರಾಜಣ್ಣ  ಅಧ್ಯಕ್ಷತೆ ವಹಿಸಿದ್ದರು.   ಮುಖ್ಯ ಅತಿಥಿಗಳಾಗಿ  ಸ್ವಾತಂತ್ರ್ಯ ಹೋರಾಟಗಾರರ ಸಂಘ  ಅಧ್ಯಕ್ಷ ಡಾ.ಎಂ.ಜಿ‌ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ  ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ ಚಂದ್ರಶೇಖರ್  , ಇಳೈಆಳ್ವಾರ್ ಸ್ವಾಮೀಜಿ , ಅರವಿಂದ್ ಶರ್ಮ ಮತ್ತಿತರರು ಉಪಸ್ಥಿತಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: