ಸುದ್ದಿ ಸಂಕ್ಷಿಪ್ತ
‘ದೀಪ್ತಿ ಕೀರ್ತಿ ಶಿಖರ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ದೀಪ್ತಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಡಿ.24 ರ ಬೆ.10 ಗಂಟೆಗೆ ರೋಟರಿ ಸಭಾಂಗಣದಲ್ಲಿ ‘ದೀಪ್ತಿ ಕೀರ್ತಿ ಶಿಖರ’ ಪ್ರಶಸ್ತಿ ಪ್ರದಾನ, ಹಿರಿಯ ಸಾಹಿತಿ ಡಾ.ಸಿ.ಪಿ.ಕೆ ಅವರ ‘ಹನಿಹಳ್ಳ’ ಹಾಗೂ ‘ಕ್ಷಮಿಸು ಹೆಣ್ಣೆ ಕ್ಷಮಿಸು’ ಎರಡು ಕೃತಿಗಳ ಲೋಕಾರ್ಪಣೆ ಮತ್ತು ‘ವರ್ಷಾಂತ್ಯದಲ್ಲಿ ಹೊಸ ವರ್ಷದ ಮುನ್ನೋಟ’ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಾಹಿತಿ ಡಾ.ಸಿ.ಪಿ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದಾಸ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಡಿ.ತಿಮ್ಮಯ್ಯ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.