ಮನರಂಜನೆ

`ಬೇಬಿ ಬಂಪ್’ ಫೋಟೋ ಶೇರ್ ಮಾಡಿದ ಯಶ್ ದಂಪತಿ

ಬೆಂಗಳೂರು,ಆ.13-ಸ್ಯಾಂಡಲ್ ವುಡ್ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ತಂದೆ-ತಾಯಿಯಾಗುತ್ತಿದ್ದಾರೆ. ಈ ವಿಚಾರವನ್ನು ಕೆಲದಿನಗಳ ಹಿಂದೆ ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಇದೀಗ ಮೊದಲ ಬಾರಿಗೆ `ಬೇಬಿ ಬಂಪ್’ ಫೋಟೋವನ್ನು ಶೇರ್ ಮಾಡಿದ್ದಾರೆ.

ರಾಧಿಕಾ ಪಂಡಿತ್, ಯಶ್ ಅವರೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ತಿಳಿ ನೀಲಿ ಬಣ್ಣದ ಉಡುಪು ಧರಿಸಿರುವ ರಾಧಿಕಾ ಪಂಡಿತ್ ಅವರು ತಾಯ್ತನದ ಸಂತಸವನ್ನು ಸಂಭ್ರಮಿಸುತ್ತಿದ್ದಾರೆ. ಫೋಟೋದಲ್ಲಿ ಬೇಬಿ ಬಂಪ್ ಕಾಣುತ್ತಿದೆ.

ಯಶ್- ರಾಧಿಕಾ ಎಂಗೇಜ್ ಆಗಿ ನಿನ್ನೆಗೆ 2 ವರ್ಷ ತುಂಬುತ್ತದೆ. ಇದೇ ಸಂತೋಷದಲ್ಲಿ ಯಶ್ ದಂಪತಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ಸ್ ಗಳು ಬರುತ್ತಿವೆ.

Leave a Reply

comments

Related Articles

error: